ಕರೆನ್ಸಿ ನೋಟು ಮುದ್ರಣ ಸ್ಥಗಿತ

ಕರೆನ್ಸಿ ನೋಟು ಮುದ್ರಣ ಸ್ಥಗಿತ

ಮುಂಬೈ : ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಮಹಾರಾಷ್ಟ್ರ ಸರ್ಕಾರದ ಬ್ರೇಕ್ ದ ಚೈನ್ ಅಭಿಯಾನ ಆರಂಭಿಸಿದೆ. ಹೀಗಾಗಿ ಏಪ್ರಿಲ್ 30 ರ ವರೆಗೆ ನಾಸಿಕ್‌ನಲ್ಲಿ ಕರೆನ್ಸಿ ನೋಟು ಮುದ್ರಣ ನಿಲ್ಲಿಸಲಾಗಿದೆ.

ನಾಸಿಕ್ ನಲ್ಲಿರುವ ಕರೆನ್ಸಿ ಸೆಕ್ಯೂರಿಟಿ ಪ್ರೆಸ್ ಮತ್ತು ಇಂಡಿಯಾ ಸೆಕ್ಯೂರಿಟಿ ಪ್ರೆಸ್‌ನಲ್ಲಿ ಕರೆನ್ಸಿ ನೋಟುಗಳನ್ನು ಮುದ್ರಿಸುವುದನ್ನು ಏಪ್ರಿಲ್ 30 ರವರೆಗೆ ಸ್ಥಗಿತಗೊಳಿಸಲಾಗಿದೆ. ಎರಡೂ ಮುದ್ರಣಾಲಯದಲ್ಲಿ ಅಗ್ನಿಶಾಮಕದಳ, ನೀರು ಸರಬರಾಜು, ವೈದ್ಯಕೀಯ ಸೇವೆಯಂತಹ ತುರ್ತು ಸೇವೆಗಳಿಗೆ ಸಂಪರ್ಕ ಹೊಂದಿರುವ ಸಿಬ್ಬಂದಿ ಮಾತ್ರ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಉಳಿದಂತೆ ಯಾವುದೇ ಕರೆನ್ಸಿ ನೋಟುಗಳನ್ನು ನಿರ್ಬಂಧ ಸಡಿಲಿಕೆಗೆ ಆಗುವವರೆಗೆ ಮುದ್ರಿಸಲಾಗುವುದಿಲ್ಲ.

ಭಾರತದಲ್ಲಿ ಚಲಾವಣೆಯಲ್ಲಿರುವ ಶೇಕಡ 40 ರಷ್ಟು ನೋಟುಗಳನ್ನು ನಾಸಿಕ್ ನಲ್ಲಿ ಮುದ್ರಿಸಲಾಗಿದೆ. ಇವೆರಡೂ ಪ್ರೆಸ್ ಗಳಲ್ಲಿ 3000 ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಾರೆ. ಕೆಲಸ ನೌಕರರು ಮತ್ತು ಅವರ ಕುಟುಂಬದವರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ವರ್ಷವೂ ಕೋವಿಡ್ ಕಾರಣದಿಂದ ಪ್ರಿಂಟಿAಗ್ ಪ್ರೆಸ್ ಮುಚ್ಚಲಾಗಿತ್ತು.

Related