ಸಿಟಿ ರವಿಗೆ ವಿಧಾನಪರಿಷತ್ ಅಥವಾ ವಿಧಾನಸಭೆಯಲ್ಲಿ ಅವಕಾಶ: ಮಾಜಿ ಸಿಎಂ

ಸಿಟಿ ರವಿಗೆ ವಿಧಾನಪರಿಷತ್ ಅಥವಾ ವಿಧಾನಸಭೆಯಲ್ಲಿ ಅವಕಾಶ: ಮಾಜಿ ಸಿಎಂ

ಕಡೂರು: ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಸಿ ಟಿ ರವಿ ಅವರಿಗೆ ಅನ್ಯಾಯವಾಗಿದೆ ಇದರ ಬಗ್ಗೆ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.

ಸಿಟಿ ರವಿ ಅವರಿಗೆ ವಿಧಾನ ಪರಿಷತ್ ಅಥವಾ ವಿಧಾನಸಭೆಯಲ್ಲಿ ಅವಕಾಶ ದೊರಕಿಸಿ ಕೊಡುವ ಪ್ರಾಮಾಣಿಕ ಪ್ರಯತ್ನವನ್ನು ನಾವು ಮಾಡುತ್ತೇವೆ ಆದ್ದರಿಂದ ಸಿಟಿ ರವಿ ಅವರು ಕೊಂಚ ತಾಳ್ಮೆಯಿಂದ ಕಾಯಬೇಕೆಂದು ಹೇಳಿದ್ದಾರೆ.

ಚಿಕ್ಕಮಂಗಳೂರು ಜಿಲ್ಲೆಯ ಜಿಲ್ಲೆ ಸಖರಾಯಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಪರ ಚುನಾವಣಾ ಪ್ರಚಾರ ಮಾತನಾಡಿದ ಅವರು, ಸಿ.ಟಿ.ರವಿ ಅವರು ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ತಮಗಾದ ಸೋಲಿನ ಕುರಿತು ವ್ಯಕ್ತಪಡಿಸಿದ ನೋವನ್ನು ಆಲಿಸಿದ ಬಳಿಕ ಯಡಿಯೂರಪ್ಪ ಈ ಭರವಸೆ ನೀಡಿದರು.

ವಿಧಾನಸೌಧದಲ್ಲಿ ಗುಡುಗುವಂಥವರು ಹೊರಗಿದ್ದಾರೆ. ನಾನು ಇದನ್ನು ಸಹಿಸುವುದಿಲ್ಲ. ವಿಧಾನ ಪರಿಷತ್ ಅಥವಾ ವಿಧಾನಸಭೆಯಲ್ಲಿ ಅವಕಾಶ ದೊರಕಿಸಿಕೊಡುವ ಮೂಲಕ ಸಿ.ಟಿ.ರವಿಗೆ ಆದ ಅನ್ಯಾಯ ತುಂಬಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ಖಂಡಿತ ಮಾಡುತ್ತೇನೆ ಎಂದರು.

 

Related