ಮಾದ್ಯಮದರ ಮೇಲಿನ ಹಲ್ಲೆ ಖಂಡನೆ

ಮಾದ್ಯಮದರ ಮೇಲಿನ ಹಲ್ಲೆ ಖಂಡನೆ

ಸಿಂದಗಿ : ಬೆಂಗಳೂರಿನ ಡಿ.ಜೆ. ಹಳ್ಳಿಯ ಘಟನೆಯ ವರದಿಗೆ ತೆರಳಿದ್ದ ಮಾಧ್ಯಮ ಮೇಲಿನ ಹಲ್ಲೆ ಖಂಡಿಸಿ, ಆರೋಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿ, ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘ ಗುರುವಾರ ತಹಶೀಲ್ದಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಆನಂದ ಶಾಬಾದಿ ಮಾತನಾಡಿ, ಕೆಲವು ರಾಜಕೀಯ, ಸಮುದಾಯಿಕ ಪ್ರೇರಿತವಾದ, ಘಟನೆಗಳಿಗೆ ಸಂಬಂಧಿಸಿದಂತೆ ವರದಿಗೆ ತೆರಳಿದ್ದವರ ಮೇಲೆ ಹಲ್ಲೆ ಮಾಡುವ ಮೂಲಕ ಗೂಂಡಾವರ್ತನೆ ತೋರಿದ್ದು ಖಂಡನೀಯ ಎಂದರು.

ದಿನವೂ ಅಭದ್ರತೆಯಲ್ಲಿಯೇ ಕೆಲಸ ಮಾಡುತ್ತಿರುವ ಮಾದ್ಯಮ ಮಿತ್ರರ ಮೇಲೆ ಮಾರಣಾಂತಿಕ ಹಲ್ಲೆ, ಕೊಲೆ ಮಾಡುತ್ತಿರುವ ಘಟನೆಗಳು ವೃತ್ತಿಯ ಬಗ್ಗೆ ಭಯಮೂಡಿಸುತ್ತಿದೆ. ಸರಕಾರ ಪತ್ರಕರ್ತರ ಭದ್ರತೆ ಮತ್ತು ಕಾಳಜಿಗೆ ವಿಶೇಷ ಒತ್ತು ನೀಡಿ, ಸಾರ್ವಜನಿಕವಾದ ಹಲ್ಲೆಗಳನ್ನು ತಡೆಯಲು ಸೂಕ್ತ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

Related