ಮೊಸಳೆಯನ್ನ ಮನೆಯಲ್ಲಿ ಸಾಕಿದ್ದು ಭೂಪ

ಮೊಸಳೆಯನ್ನ ಮನೆಯಲ್ಲಿ ಸಾಕಿದ್ದು ಭೂಪ

ಸಾಮಾನ್ಯವಾಗಿ ಜನರು ತಮ್ಮ ರಕ್ಷಣೆಗಾಗಿ ಅಥವಾ ಅವರ ಹವ್ಯಾಸಕ್ಕಾಗಿ ಕೆಲವು ಸಾಕುಪ್ರಾಣಿಗಳನ್ನು ಮನೆಯಲ್ಲಿ ಸಾಕುತ್ತಾರೆ. ಆದರೆ ಇಲ್ಲೊಬ್ಬ ಮೊಸಳೆಯನ್ನು ಮನೆಯಲ್ಲಿ ಸಾಕಿಕೊಂಡು ಸಿಕ್ಕಿಬೊಇದ್ದಿರುವ ಘಟನೆಯೊಂದು ನಡೆದಿದೆ

ಹೌದು, ಅಮೆರಿಕಾದ ಓಹಿಯೊ ನಗರದ ಮನೆಯೊಂದರ ಕೆಳಮಾಳಿಗೆಯಲ್ಲಿ ಅಕ್ರಮವಾಗಿ ಮೊಸಳೆಯೊಂದನ್ನ ಕೂಡಿ ಹಾಕಿ ಸಾಕಿದ್ದ. ಈ ಸುದ್ದಿ ತಿಳಿದ ಅಲ್ಲಿನ ಮ್ಯಾಡಿಸನ್ ಟೌನ್ಶಿಪ್ ಪೊಲೀಸರು ಸ್ಥಳಕ್ಕಾಗಮಿಸಿ ಮೊಸಳೆಯನ್ನ ರಕ್ಷಿಸಿದ್ದಾರೆ. ವಿಚಿತ್ರ ಎಂದರೆ ಮೊಸಳೆಯಂತಹ ಪ್ರಾಣಿಗಳನ್ನ ಸಾಕಲು ಯಾವುದೇ ಪರವಾನಗೆ ಪಡೆದಿರಲಿಲ್ಲಾ ಅಂತ ತಿಳಿದುಬಂದಿದೆ. ಈ ಸಂಬಂಧ ಮೊಸಳೆಯನ್ನ ಸಾಕಿದ್ದ ವ್ಯಕ್ತಿ ತಾನಾಗಿಯೇ ಪೊಲೀಸರಿಗೆ ಶರಣಾಗಿದ್ದಾನೆ.

ಈ ಘಟನೆ ಕುರಿತು ಪೊಲೀಸರು ತಮ್ಮ ಫೇಸ್ಬುಕ್ ಖಾತೆಯಲ್ಲಿ ತಾವು ನಡೆಸಿದ ರಕ್ಷಣಾ ಕಾರ್ಯಾಚರಣೆಯನ್ನ ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ಪೊಲೀಸ್ ಅಕಾಡೆಮಿಯ ತರಬೇತಿಯಲ್ಲಿ ನಮಗೆ ಕಲಿಸದ ಕೆಲವು ವಿಷಯಗಳಿವೆ ಅಂತ ಮೊಸಳೆ ರಕ್ಷಿಸಿದ ಫೋಟೋ ಹಾಕಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇನ್ನೂ ರಕ್ಷಣೆ ಮಾಡಿದ್ದ 25 ವರ್ಷದ ಮೊಸಳೆಯನ್ನ ಮೈರ್ಟಲ್ ಬೀಚ್ನ ಪ್ರಾಣಿಧಾಮಕ್ಕೆ ಬಿಡಲಾಗಿದೆ.

 

Related