ಅಮೆರಿಕಾದಲ್ಲಿ ಕೊರೋನಾ ರೌದ್ರನರ್ತನ

ಅಮೆರಿಕಾದಲ್ಲಿ ಕೊರೋನಾ ರೌದ್ರನರ್ತನ

ವಾಷಿಂಗ್ಟನ್: ಚೀನಾದಲ್ಲಿ ಹುಟ್ಟಿ ವಿಶ್ವದ 200ಕ್ಕೂ ಹೆಚ್ಚು ದೇಶಗಳನ್ನು ವ್ಯಾಪಿಸಿ ಸಾವಿನ ಬಲೆಯನ್ನೇ ಬೀಸಿರುವ ಮಹಾಮಾರಿ ಕೊರೋನಾ ವೈರಸ್ ಸೋಂಕು ದಿನೇ ದಿನೇ ಸಾಕಷ್ಟು ವೇಗದಲ್ಲಿ ಹರಡುತ್ತಿದೆ. ವಿಶ್ವದ  ದೊಡ್ಡಣ್ಣನೆಂದು ಖ್ಯಾತಿ ಪಡೆದಿರುವ ಅಮೆರಿಕಾದಲ್ಲಿ  ಕೊರೋನಾ ತನ್ನ ರೌದ್ರ ನರ್ತನ ಮುಂದುವ ರೆಸಿದೆ.

ಅತೀ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ಅಮೆರಿಕಾ ಮತ್ತೊಂದು ಕುಖ್ಯಾತಿಗೆ ಪಾತ್ರವಾಗಿದೆ. ಅಮೆರಿಕಾದಲ್ಲಿ ಕೊರೋನಾಗೆ  1 ಲಕ್ಷ ಮಂದಿ ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ರಾಷ್ಟ್ರದಲ್ಲಿ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 1 ಲಕ್ಷ ಗಡಿ ದಾಟಿದೆ. ಈ ಮೂಲಕ ಲಕ್ಷದ ಗಡಿದಾಟಿದ ಮೊದಲ ರಾಷ್ಟ್ರವಾಗಿ ಅಮೆರಿಕಾ ಹೊರಹೊಮ್ಮಿದೆ.

 

 

Related