ಕೊರೊನಾ: ಹೋಟೆಲ್ ಉದ್ಯಮ ಅಯೋಮಯ

ಕೊರೊನಾ: ಹೋಟೆಲ್ ಉದ್ಯಮ ಅಯೋಮಯ

ಇಂಡಿ: ಕೊರೊನಾ ಲಾಕಡೌನ್ ಹೊಡೆತಕ್ಕೆ ನಲುಗಿದ ಕ್ಷೇತ್ರಗಳಲಿÀು ಹೋಟೆಲ್ ಉದ್ದಮವೂ ಒಂದು. ಈಗಾಗಲೇ ಸರಿ ಸುಮಾರು ಎರಡು ತಿಂಗಳು ಸಂಪೂರ್ಣ ಬಾಗಿಲು ಎಳೆದಿದ್ದರಿಂದ ಸಣ್ಣ ಹೋಟೆಲ್ ಉದ್ಯಮ ಅಯೋಮಯವಾಗಿದೆ.

ಇಂಡಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಸರಿ ಸುಮಾರು 200 ಕ್ಕೂ ಹೆಚ್ಚು ಹೋಟೆಲ್‍ಗಳಿದ್ದು, ಪ್ರತಿದಿನ ಅಂದಾಜು 5 ಲಕ್ಷ ರೂ ಸೇರಿದಂತೆ ಪ್ರತಿ ತಿಂಗಳು 1.5 ಕೋಟಿಯಿಂದ ಎರಡು ಕೋಟಿಯ ವರೆಗೂ ಅಂದಾಜು ನಷ್ಟವಾಗಿದೆ. ಅದಲ್ಲದೆ ಹೋಟೆಲ್‍ಗಳಲ್ಲಿ ದುಡಿಯುವ ವರ್ಗ ಸರಿ ಸುಮಾರು 1000 ದಿಂದ 1500 ಕುಟುಂಬಗಳು ಸಂಕಷ್ಟದಲ್ಲಿದೆ.

ಹೋಟೆಲ್‍ಗಳಿಗೆ ಬರಬೇಕಿದ್ದ ಹಾಲು, ಕಾಯಿಪಲ್ಲೆ ಸೇರಿದಂತೆ ಕಿರಾಣಿ ಸಾಮಾನುಗಳು ಹೋಟೆಲ್ ಬಂದದಿಂದ ತೊಂದರೆ ಅನುಭವಿಸಿವೆ. ಅದಲ್ಲದೆ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ 30 ಕ್ಕೂ ಹೆಚ್ಚು ಅತ್ಯುತ್ತಮ ಹೋಟೆಲ್‍ಗಳಿದ್ದು, ಅವರಿಂದ ಪ್ರತಿದಿನ ಪ್ರತಿ ಹೋಟೆಲ್‍ಗೆ ರೂ ಹತ್ತು ಸಾವಿರದಂತೆ ತಿಂಗಳಿಗೆ ಅಂದಾಜು 1 ರಿಂದ 1.5 ಕೋಟಿ ಹಾನಿ ಅದಲ್ಲದೆ ಇಂಡಿ ಪಟ್ಟಣ ಸೇರಿದಂತೆ ಗ್ರಾಮಗಳಲ್ಲಿ ಸುಮಾರು 80 ಬಾರ್ ಮತ್ತು ಮತ್ತು ಡಾಬಾಗಳಿದ್ದು, ಅದರಿಂದ ಪ್ರತಿದಿನ 8 ಲಕ್ಷ ರೂ ರಂತೆ ತಿಂಗಳಿಗೆ 2.5 ಯಿಂದ 3 ಕೋಟಿಯವರೆಗೆ ಹಾನಿ ವ್ಯಾಪಾರಸ್ಥರಿಗೆ ಆಗಿದೆ.

ಸಣ್ಣ ಪುಟ್ಟ ಹೋಟೆಲ್ ಸೇರಿದಂತೆ ಒಳ್ಳೆಯ ಹೋಟೆಲ್, ಬಾರ್ ಹಾಗೂ ಡಾಬಾಗಳನ್ನು ನಡೆಸಿಕೊಂಡು ಅದರಲ್ಲಿಯೇ ಬದುಕು ಕಟ್ಟಿಕೊಂಡಿದ್ದ ನೂರಾರು ಕುಟುಂಬಗಳು ಇಂದು ಬೀದಿಗೆ ಬರುವ ಸ್ಥಿತಿ ನಿರ್ಮಾಣಗೊಂಡಿದೆ. ಎರಡು ತಿಂಗಳಿಂದ ಕೊರೊನಾ ಬರೆಗೆ ತತ್ತರಿಸಿ ಹಾಕಿದ ಬಾಗಿಲು ಇಂದಿಗೂ ತೆರೆದಿಲ್ಲ. ಬೇರೆ ಬೇರೆ ಊರುಗಳಿಂದ ಬಂದು ಇಲ್ಲವೇ ಸ್ಥಳೀಯವಾಗಿ ಇದ್ದುಕೊಂಡು ಪಟ್ಟಣ ಹಳ್ಳಿಗಳಲ್ಲಿ ಹೋಟೆಲ್ ಮಾಡಿಕೊಳ್ಳುವ ಕಾಫೀ, ಟೀ ಮಾಡಿ ಮಾರಿ ಜೀವನ ಸಾಗಿಸುತ್ತಿದ್ದ ಸಹಸ್ರಾರು ಕುಟುಂಬಗಳು ಸ್ವಂತ ಊರಿಗೂ ಹೋಗಲಾಗದೆ ಇದ್ದಲ್ಲಿಯೂ ಇರಲಾಗದೆ ಡೋಲಾಯಮಾನ ಸ್ಥಿತಿಯಲ್ಲಿವೆ.

ಬಾಗಿಲು ತೆರೆದರೂ ಗ್ರಾಹಕರು ಕೂರುವಂತಿಲ್ಲ. ಬರೀ ಪಾರ್ಸೆಲ್ ಮಾತ್ರ ಗ್ರಾಮಾಂತರ ಪ್ರದೇಶಗಳಲ್ಲಿ ಹೋಟೆಲುಗಳಿಗೆ ಬರುವವರಿಗೆ ಸಂಖ್ಯೆಯೇ ಕಡಿಮೆ. ಅದರಲ್ಲಿಯೂ ಪಾರ್ಸೆಲ್ ದೂರದ ಮಾತು. ಹೀಗಾದರೆ ನಾವು ಬದಕುವುದಾದರೂ ಹೇಗೆ ಎಂದು ಕಾಣದ ಕೊರೊನಾಕ್ಕೆ ಹಿಡಿ ಶಾಪ ಹಾಕುತ್ತಾರೆ. ಮಾಲಿಕರು, ಕೆಲಸಗಾರರು, ಕಟ್ಟಡ ಮಾಲಿಕರು ಬಾಡಿಗೆ ಪಡೆಯದಿದ್ದರೆ ಹೇಗೂ ಉಸಿರಾಡಿಸಬಹುದು.

ಜತೆಯಲ್ಲಿ ಬ್ಯಾಂಕುಗಳಲ್ಲಿ ಹೋಟೆಲ್ ಗಳ ನಡೆಸಲು ಸಣ್ಣ ಪುಟ್ಟ ಸಾಲಮಾಡಿಕೊಂಡಿದ್ದು, ಅದನ್ನು ತಿರಿಸುವ ಪರಿ ಕಾಣದೆ ಸಂಕಟ ಪಡುತ್ತಿದ್ದಾರೆ.ಸರಕಾರ ಹೇಳುತ್ತದೆ ಹೋಟೆಲುಗಳನ್ನು ತೆರೆಯಬೇಡಿ, ಇಲ್ಲಿಂದಲೇ ಕೊರೊನಾ ಹೆಚ್ಚಾಗುತ್ತದೆ ಎನ್ನುತ್ತದೆ. ಇಲ್ಲಿಯ ತನಕ ನಮ್ಮ ನೆರವಿಗೆ ಧಾವಿಸಿಲ್ಲ ಸಾವಿರಾರು ಕುಟುಂಬಗಳು ಅತಂತ್ರಗೊಂಡಿವೆ ಎಂಬ ಕೂಗು ಅಲ್ಲಲ್ಲಿ ಕೆಳಿಬಂದಿತು.
**
ಎರಡು ತಿಂಗಳಿಂದ ಹೋಟೆಲ್ಲಗಳನ್ನು ತೆರೆದಿಲ್ಲ, ಮಳಿಗೆ ಮಾಲಿಕರು ಬಾಡಿಗೆ ಬಿಟ್ಟಿಲ್ಲಿ ಸ್ವಲ್ಪ ಉಸಿರಾಡಿಸಬಹುದು. ಸರಕಾರ ನಮ್ಮ ಸಹಾಯಕ್ಕೆ ಬಂದು ಏನಾದರೂ ಅನುಕೂಲ ಮಾಡಿಕೊಡಬಹುದೆನೋ ಎಂಬ ನಿರೀಕ್ಷೆಯಲ್ಲಿದ್ದೇವೆ ಕಾಂತು ಶಟಗಾರ ಹೊಟೇಲ ಮಾಲಿಕ ಇಂಡಿ.
**
ಎರಡು ತಿಂಗಳು ಕೊರೊನಾ ಲಾಕಡೌನ್‍ನಿಂದ ಜೀವನ ನಡೆಸುವದು ದುಸ್ತರವಾಗಿದೆ. ಹೋಟೆಲ್ಲು, ಡಾಬಾ ನಡೆಸಲು ಬ್ಯಾಂಕುಗಳಲ್ಲಿ ಸಣ್ಣ ಸಣ್ಣ ಸಾಲ ಮಾಡಿಕೊಂಡಿದ್ದೇವು. ಅವುಗಳನ್ನು ತೀರಿಸುವುದೋ ಅಥವಾ ಜೀವನ ನಡೆಸುವುದೋ ತಿಳಿಯದಾಗಿದೆ.
– ಅನೀಲಗೌಡ ಬಿರಾದಾರ ಡಾಬಾ ಮಾಲಿಕ ಇಂಡಿ

Related