ಕೊರೋನಾ ವೈರಸ್ ಸಂದಿಗ್ಧ ಸ್ಧಿತಿಯಲ್ಲಿ ರೈತರು

ಕೊರೋನಾ ವೈರಸ್ ಸಂದಿಗ್ಧ ಸ್ಧಿತಿಯಲ್ಲಿ ರೈತರು

ಕುಲ್ಸಕೂಪ್ಪ: “ಜೈ ಜವಾನ, ಜೈ ಕಿಸಾನ್” ಎಂಬ ಉಕ್ತಿಯಂತೆ ದೇಶದ ಸುಮಾರು ಶೇ.72% ಜನರು ಕೃಷಿಗೆ ಪೂರಕವಾದ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಕೃಷಿಯಿಂದ ಬರುವ ಉತ್ಪಾದನೆಯನ್ನೇ ನೆಚ್ಚಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೆ ಇದೆಂದೊ ಕಂಡರಿಯದ ಮಾಹಾಮಾರಿ ಕೊರೋನಾ ವಿಶ್ವವ್ಯಾಪಿ ಹರಡಿ ಜನರ ಆರೋಗ್ಯವನ್ನು ಕೆಡಿಸಿದೆ ಹಾಗೂ ಕೆಲವರನ್ನು ಸಾವನ್ನು ತಂದೊಡಿದ್ದೆ.

ದೇಶದ ಆರ್ಧಿಕ ವ್ಯವಸ್ಧೆಯನ್ನು ನಿರ್ಣಯಿಸುವಲ್ಲಿ ಕೃಷಿಯ ಪಾತ್ರ ದೊಡ್ಡದಿದೆ. ಆದರೆ ಕೃಷಿ ಕ್ಷೇತ್ರದ ಮೇಲೆ ಕೊರೋನಾ ಎಂಬ ವೈರಸ್ ಬೀರಿದ ಪ್ರಭಾವ ಮತ್ತು ಪರಿಣಾಮ ಅಷ್ಟಿಷ್ಟಲ್ಲ. ಸಾಲ ಬಾಧೆ ಮದ್ಯವರ್ತಿಗಳ ಹಾವಳಿ, ವಿದ್ಯುತ್ ಕೊರತೆ, ನೀರಾವರಿ ಕೊರತೆ, ಸರಿಯಾದ ಬೆಲೆ ಸಿಗದೆ ಇರುವಿಕೆ, ಬರಗಾಲ, ಅತೀವೃಷ್ಠಿಯಂತಹ ಪ್ರಕೃತಿ ವಿಕೋಪಗಳಿಂದಾಗಿ ರೈತÀ ಸಮುದಾಯವನ್ನು ತಲ್ಲಣಗೊಳಿಸಿವೆ. ಇದರ ನಡುವೆಯೇ ಈ ಕೊರೋನಾ ಎಂಬ ವೈರಸ್ ಮಾಹಾಮಾರಿ ವಕ್ಕರಿಸಿದ್ದು ಊಹಿಸಲು ಸಾಧ್ಯವಿಲ್ಲದ ಪರಿಣಾಮಗಳು ಕೃಷಿ ಕ್ಷೇತ್ರದ ಮೇಲಾಗಿವೆ.

ಪರಿಣಾಮಗಳು
ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಧೆ ಸಿಗುತ್ತಿಲ್ಲ. ಸೂಕ್ತ ಬೆಲೆ ಸಿಗದೆ ಇರುವುದು. ತರಕಾರಿ ಮತ್ತು ಹಣ್ಣುಗಳಂತ ದ್ರಾಕ್ಷಿ, ದಾಳಿಂಬೆ, ಕಲ್ಲಂಗಡಿ ಬಹುಬೇಗ ಕೊಳಯುವ ಬೆಳೆಗಳಿಗೆ ಶೀಘ್ರ ಮಾರುಕಟ್ಟೆ ಸಿಗದೆ ಕೊಳೆಯುತ್ತಿರುವುದರಿಂದ ರೈತ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದಾರೆ. ಗೊಬ್ಬರ ಮತ್ತು ಕೀಟ ನಾಶಕಗಳ ಕೊರತೆ. ಕೃಷಿ ಉತ್ಪನ್ನಗಳನ್ನು ನೆಚ್ಚಿಕೊಂಡ ಕೆಲವು ಉದ್ಯಮಗಳು ಸ್ಧಗಿತಗೊಂಡಿರುವುದು. ರೈತರು ಆತ್ಮಹತ್ಯೆಯತ್ತ ಜರುಗುತ್ತಿರುವುದು ಸಮಾಜದ ದೊಡ್ಡ ಪಿಡುಗೆಂದರೆ ತಪ್ಪಾಗಲಾರದು.

ಪರಿಹಾರೋಪಾಯಗಳು: ಸ್ಧಳೀಯ ಮಟ್ಟದಲ್ಲಿಯೇ ಮಾರುಕಟ್ಟೆ ವ್ಯವಸ್ಧೆ ಕಲ್ಪಿಸುವುದು. ಸೂಕ್ತ ಬೆಲೆ ನಿಗದಿ. ಆರ್ಥಿಕ ವ್ಯವಸ್ಧೆ ಕಲ್ಪಿಸುವುದು. ರೈತ ಕೇಂದ್ರಗಳನ್ನು ಸ್ಥಾಪಿಸುವುದು. ಗಾಳಿ, ನೀರು, ಮಣ್ಣು ಮತ್ತು ಶಾಖವನ್ನು ನಿಸರ್ಗ ಪೂರೈಸಿದರೆ ಇವುಗಳ ಸಹಯೋಗದೊಂದಿಗೆ ಆಹಾರದ ಬೆಳಗಳನ್ನು ನಾವೇ ಬೆಳೆಯಬೇಕಾಗುತ್ತದೆ. ನಮಗೆ ಪೆಟ್ರೋಲ್, ಸಾರಿಗೆ ಸಂಪರ್ಕ ಇಲ್ಲದಿದ್ದರೂ ಸ್ವಲ್ಪ ದಿನಗಳವರೆಗೆ ಜೀವನ ಸಾಗಿಸಬಹುದು. ಆದರೆ ಆಹಾರವಿಲ್ಲದೆ ಸಾಧ್ಯವಿಲ್ಲವೆನ್ನುವುದು ಅರಿವಾಗಬೇಕು. ರೈತ ಸಮುದಾಯಕ್ಕೆ ಬೇಕಾದ ಅತ್ಯಮೂಲ್ಯ ಸಂಪನ್ಮೂಲಗಳನ್ನು ಅತೀ ಶೀಘ್ರವಾಗಿ ಒದಗಿಸಿಕೊಟ್ಟಾಗ ಸ್ವಲ್ಪ ಮಟ್ಟಿಗಾದರೂ ಈ ವಿಪತ್ತಿನ ಆಘಾತದಿಂದ ಹೊರಬರಬಹುದು.

ಒಟ್ಟಾರೆಯಾಗಿ ರೈತರು ಈ ದೇಶದ ಬೆನ್ನೆಲುಬು. ನಿಸರ್ಗದೊಡನೆ ಅನ್ಯೋನ್ಯ ಸಹಜ ಸಂಬಂಧವನ್ನಿರಿಸಿಕೊಂಡವರು ಈ ರೀತಿ ಏಕಾಏಕಿ ಉಂಟಾಗುವ ವಿಪತ್ತುಗಳಿಂದ ಸಹಜವಾಗಿಯೇ ಹೆಚ್ಚು ಮಾನಸಿಕವಾಗಿ ಕುಗ್ಗುವುದುಂಟು. ಈ ಎಲ್ಲಾ ಪರಿಣಾಮ ಬೀರುವುದು ರೈತ ಸಮುದಾಯದ ಮೇಲೆಯೆ. ಈ ಎಲ್ಲಾ ರೈತರ ಸಂಕಷ್ಟಗಳನ್ನು ಸರ್ಕಾರ ಅರಿತು ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ತಜÐರು ಸೂಕ್ತ ಸಲಹೆ ಯೋಜನೆಗಳನ್ನು ಕಲ್ಪಿಸಿಕಟ್ಟರೆ ರೈ ಸಮುದಾಯದ ಮೇಲಾಗುವ ಇಂತಹ ಪರಿಣಾಮಗಳನ್ನು ಆದಷ್ಟು ಕಡಿಮೆ ಮಾಡಬಹುದು.

Related