ಹಾನಗಲ್ ನಲ್ಲಿ ಕಾಲಿಟ್ಟಿದೆ ಕೊರೋನಾ

ಹಾನಗಲ್ ನಲ್ಲಿ ಕಾಲಿಟ್ಟಿದೆ ಕೊರೋನಾ

ಹಾನಗಲ್ :  ಹಾನಗಲ್ ತಾಲೂಕಿನ ಮೂವರು ಆಶಾ ಕಾರ್ಯಕರ್ತರಿಗೆ ಕೊರೋನಾ ಕಂಡುಬಂದಿರುವುದರಿಂದ ಜನ ಭಯಭೀತರಾಗಿದ್ದಾರೆ. ಪಟ್ಟಣದ ಇಂದಿರಾನಗರ, ಕಮಾಟಗೆರಿ ಹಾಗೂ ಕಲ್ಲಹಕಲ ಬಡಾವಣೆಯಲ್ಲಿ ವಾಸವಾಗಿರುವ ಮೂವರು ಆಶಾ ಕಾರ್ಯಕರ್ತರಿಗೆ ಕೊರೋನಾ ಕಂಡುಬಂದಿರುವುದರಿಂದ ಕೋವಿಡ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಆಶಾ ಕಾರ್ಯಕರ್ತರು ತಮ್ಮ ಬಡಾವಣೆಗಳ ಮನೆಮನೆಗಳಿಗೆ ಭೇಟಿ ನೀಡಿ, ಸಾರ್ವಜನಿಕರ ಆರೋಗ್ಯ ತಪಾಸಣೆ ಕೈಗೊಂಡಿರುವುದರಿಂದ ನೂರಾರು ಜನರಿಗೆ ಸೋಂಕು ಹರಡಿರುವ ಭೀತಿ ಎದುರಾಗಿದೆ. ಪ್ರತಿದಿನ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗರ್ಭಿಣಿಯರನ್ನು ಪರೀಕ್ಷಿಸಿದ್ದಾರೆ, ಅಲ್ಲದೆ ಬಾಣಂತಿಯರ ಮನೆಗಳಿಗೆ ಭೇಟಿ ನೀಡಿದ್ದಾರೆ.

ಪುರಸಭೆ ಸಿಬ್ಬಂದಿ ಸೀಲ್‌ಡೌನ್ ಪ್ರದೇಶಗಳಲ್ಲಿ ರಾಸಾಯನಿಕ ಸಿಂಪಡಣೆ ಕೈಗೊಂಡಿದ್ದಾರೆ. ಹಾನಗಲ್ ನಲ್ಲಿ 3 ಬಡಾವಣೆಗಳಲ್ಲಿ ಸೀಲ್‌ಡೌನ್ ಮಾಡಲು ಅಧಿಕಾರಿಗಳ ತಂಡ ಪರಿಶೀಲನೆ ಕೈಗೊಂಡಿತು.

ತಹಶೀಲ್ದಾರ್ ಎಸ್.ಎರಿಸ್ವಾಮಿ. ಸಿ.ಪಿ.ಐ. ಶಿವಶಂಕರ್ ಗಣಾಚಾರಿ ಪಿ.ಎಸ್.ಐ. ಶ್ರೀಶೈಲ ಪಟಣಶೆಟ್ಟಿ. ಡಾ. ರವೀಂದ್ರ ಗೌಡಪಾಟೀಲ್. ಪುರಸಭೆಯ ಮುಖ್ಯಾ ಅಧಿಕಾರಿ.ಎಸ್.ಎನ. ಬಜಕ್ಕನವರ ಇದ್ದರು.

Related