ಈ ಬೀಜ ಸೇವನೆಯಿಂದ ಆರೋಗ್ಯಕ್ಕೆ ನೂರೆಂಟು ಲಾಭ!

ಈ ಬೀಜ ಸೇವನೆಯಿಂದ ಆರೋಗ್ಯಕ್ಕೆ ನೂರೆಂಟು ಲಾಭ!

ನಮ್ಮ ದೇಹವನ್ನು ತಂಪಾಗಿರಿಸಿಕೊಳ್ಳಲು ವಿವಿಧ ರೀತಿಯ ಹಣ್ಣು ಹಂಪಲು ಅಥವಾ ತಂಪು ಪಾನೀಯಗಳನ್ನು ಸೇವಿಸುತ್ತೇವೆ. ಆದರೆ ಮನೆಯಲ್ಲಿ ಸಿಗುವಂತಹ ಕಾಮಕಸ್ತೂರಿ ಬೀಜಗಳನ್ನು ನೆನೆಸಿ ಸೇವಿಸುವುದರಿಂದ ನಮ್ಮ ದೇಹದಲ್ಲಿರುವಂತಹ ಉಷ್ಣಾಂಶ ಕಡಿಮೆಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಕಾಮಕಸ್ತೂರಿ ಬೀಜವನ್ನು ನೀರಿನೊಂದಿಗೆ ಬೆರೆಸಿ ಕುಡಿಯುವುದು ಅಥವಾ ಇದರಿಂದ ಪಾನೀಯಗಳನ್ನು ತಯಾರಿಸಿ ಕುಡಿಯುವುದರಿಂದ ಬೇಸಿಗೆಯ ಸುಡುವ ಶಾಖದಿಂದ ದೇಹವನ್ನು ರಕ್ಷಿಸುತ್ತದೆ. ಇದು ನೈಸರ್ಗಿಕವಾಗಿ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಹೊಟ್ಟೆಗೂ ಹಿತವನ್ನುಂಟು ಮಾಡುತ್ತದೆ. ಇದನ್ನು ನಿಂಬೆಪಾನಕ, ಎಳನೀರು, ಮಿಲ್ಕ್‌ಶೇಕ್‌, ಮೊಸರಿನ ಜೊತೆ ಮಿಶ್ರಣ ಮಾಡಿ ಕುಡಿಯುವುದು ಉತ್ತಮ.

ಕಾಮಕಸ್ತೂರಿ ಬೀಜ ತಿನ್ನುವುದರಿಂದ ಸಿಗುವ ಲಾಭಗಳು

ಉಷ್ಣಾಂಶ ಕಡಿಮೆ ಮಾಡಿ ದೇಹ ತಂಪಾಗಿತುವಂತೆ ನೋಡಿಕೊಳ್ಳಲು ಸಹಾಯಕ.

ಬಾಯರಿಕೆ ಕಡಿಮೆ

ಹೊಟ್ಟೆಯ ಆಮ್ಲವನ್ನು ಕಡಿಮೆ ಮಾಡುತ್ತದೆ.

ಚರ್ಮದ ಕಾಂತಿಗಾಗಿ ಕೂಡ ಈ ಕಾಮಕಸ್ತೂರಿ ಬೀಜ ಸೇವನೆ ಮಾಡುತ್ತಾರೆ.

ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರದಂತೆ ಕಾಪಾಡುತ್ತದೆ.

ಮಲಬದ್ದತೆಯ ಸಮಸ್ಸೆಯನ್ನು ನಿರ್ವಾಹರಣೆ ಮಾಡುತ್ತದೆ.

Related