ನಮ್ಮ ನಾಯಕರ ಮೇಲೆ ಕೇಸ್ ಹಾಕಿದ್ದಾರೆ, ಬಿಜೆಪಿ ಮೇಲೆ ಮಾತ್ರ ಪ್ರಕರಣ ದಾಖಲಿಸಿಲ್ಲ : ಡಿಕೆಶಿ

ಬೆಂಗಳೂರು: ಮೇಕೆದಾಟು ನಿಯಮ ಉಲ್ಲಂಘನೆ ಪ್ರಕರಣದ ಸಮನ್ಸ್ ನನಗೆ ಸಿಕ್ಕಿರಲಿಲ್ಲ, ನಂತರ ನನಗೆ ಗೊತ್ತಾಯ್ತು. ಕೋರ್ಟ್​ಗೆ ಗೌರವ ಕೊಡಬೇಕು, ಕೊಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಾಯಕರ ಮೇಲೆ ಮಾತ್ರ ಕೇಸ್ ಹಾಕಿದ್ದಾರೆ. ಬಿಜೆಪಿಯವರು ಆ ವೇಳೆ ಎಷ್ಟು ಕಾರ್ಯಕ್ರಮ ಮಾಡಿದ್ದರು. ಆದರೆ ಅವರ ಮೇಲೆ ಯಾಕೆ ಪ್ರಕರಣ ದಾಖಲಿಸಿಲ್ಲ..? ​ ಎಂದು ಪ್ರಶ್ನಿಸಿದ್ದಾರೆ.


ಪಠ್ಯ ಕ್ರಮದಲ್ಲಿ ಕೆಲ ಪಾಠ ಕೈಬಿಡುವ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ಪಠ್ಯದಲ್ಲಿ ರಾಜಕೀಯ ಅಜೆಂಡಾ ತುರುತ್ತಿದ್ದಾರೆ. ಅವರ ಪಕ್ಷಕ್ಕೆ ಅನುಕೂಲ ಮಾಡಲು ಹೋಗುತ್ತಿದ್ದಾರೆ. ಇತಿಹಾಸ ಯಾರು ಬದಲಿಸಲು ಸಾಧ್ಯವಿಲ್ಲ . ಅವರ ಸಂಘಟನೆ ವಿಚಾರ ಮಕ್ಕಳಿಗೆ ತುರುಕುವುದು ಬೇಡ. ಸಂಘಟಕರನ್ನು ಸ್ವಾತಂತ್ರ್ಯ ತಂದವರಂತೆ ಬಿಂಬಿಸಲು ಹೊರಟಿದ್ದಾರೆ. ಇದು ಅಪರಾಧ. ಜನರೇ ಇವರಿಗೆ ಬುದ್ಧಿ ಕಲಿಸುತ್ತಾರೆ ಎಂದರು.
ಇನ್ನು ಮೀಸಲಾತಿ ಕೊಟ್ಟು ಬಿಬಿಎಂಪಿ ಚುನಾವಣೆ ಮಾಡಿ. ಇದು ಸರ್ಕಾರದ ಜವಾಬ್ದಾರಿ. ನಮ್ಮ ಜೊತೆ ಸಭೆ ಮಾಡಿದಾಗ ಹೇಳಿದ್ದೇವೆ. ಸಾಮಾಜಿಕ ನ್ಯಾಯಕ್ಕೆ ಅವಕಾಶ ಕೊಡಿ. ಕೊಟ್ಟು ಚುನಾವಣೆ ಮಾಡಿ ಎಂದು ಹೇಳಿದ್ದೇವೆ. ಕೋರ್ಟ್ ಮೀಸಲಾತಿ ಇಲ್ಲದೆ ಚುನಾವಣೆ ಮಾಡಿ ಎಂದು ನಾವು ಹೇಳಿಲ್ಲ ಎಂದರು

Related