ರಾಜ್ಯದಲ್ಲಿ ಏನಾದರೂ ಅಭಿವೃದ್ದಿಯಾಗಿದ್ದರೆ ಅದು ಕಾಂಗ್ರೆಸ್ನಿಂದ ಮಾತ್ರ : ಸಿದ್ದರಾಮಯ್ಯ

ಮೈಸೂರು, ಮೇ 25 :  ಕಾಂಗ್ರೆಸ್ ಕಾಂಗ್ರೆಸ್ ಈ ಚುನಾವಣೆಯನ್ನಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿಯೇ ಮುಂಚಿತವಾಗಿ ಮಧುಮಾದೇಗೌಡರನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಮಧು ಹಿಂದೆ ಮದ್ದೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಮಾದೇಗೌಡ ಇಡೀ ನಾಡಿಗೆ ಚಿರಪರಿಚಿತರು.

ಆರು ಬಾರಿ ಶಾಸಕರು, ಎರಡು ಬಾರಿ ಸಂಸದರಾಗಿದ್ದರು. ಬಡವರು, ರೈತರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದರು. ಕೊನೆಯುಸಿರುವವರೆಗೂ ರೈತರ ಬಗ್ಗೆ ಕಾಳಜಿ ವಹಿಸುತ್ತಾರೆ. ತಂದೆ ಹಾಕಿದ ದಾರಿಯಲ್ಲೇ ಮಧು ಕೂಡ ನಡೆಯುತ್ತಿದ್ದಾರೆ. ಅಂತಹ ಮಾದೇಗೌಡರ ಮಗ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಮಾಡಬೇಕೆಂದು ಸ್ಪರ್ಧಿಸಿದ್ದಾರೆ.

ರಾಜ್ಯದಲ್ಲಿ ಏನಾದರೂ ಅಭಿವೃದ್ದಿಯಾಗಿದ್ದರೆ ಕಾಂಗ್ರೆಸ್ನಿಂದ ಮಾತ್ರ. ರಾಜ್ಯದಲ್ಲಿ ಬಡತನ, ಬೆಲೆ ಏರಿಕೆ, ಕೋಮುಗಲಭೆಗೆ ಬಿಜೆಪಿ ಕಾರಣ. ಮತದಾರರನ್ನ ಕಾಂಗ್ರೆಸ್ ವೈಯಕ್ತಿಕವಾಗಿ ಭೇಟಿ ಮಾಡಬೇಕಿದೆ. ಮೈಸೂರು ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಶ್ರಮವಹಿಸಬೇಕು. ಮನೆ ಬಾಗಿಲಿಗೆ ಹೋಗಿ ಮತಯಾಚನೆಮಾಡಿ. ಬಿಜೆಪಿ ವೈಫಲ್ಯಗಳಬಗ್ಗೆ ತಿಳಿಹೇಳಬೇಕು. ಕಾನೂನು ಸುವ್ಯವಸ್ಥೆ ಸರಿ ಇಲ್ಲದಿದ್ರೆ, ಯಾವ ರಾಜ್ಯವೂ ಉದ್ದಾರ ಆಗಲ್ಲ.

Related