ಸಿಎಂ ನಿವಾಸಕ್ಕೆ ಮೊಬೈಲ್ ಬಳಕೆ ನಿಷೇಧ

  • In State
  • August 16, 2021
  • 297 Views
ಸಿಎಂ ನಿವಾಸಕ್ಕೆ ಮೊಬೈಲ್ ಬಳಕೆ ನಿಷೇಧ

ಬೆಂಗಳೂರು : ಇದುವರೆಗೆ ಮುಖ್ಯಮಂತ್ರಿಗಳ ನಿವಾಸಕ್ಕೆ ಭೇಟಿ ನೀಡುವಂತ ಸಾರ್ವಜನಿಕರಿಗೆ ಮೊಬೈಲ್ ಬಳಕೆ ನಿಷೇಧವಿರಲಿಲ್ಲ. ಇನ್ಮುಂದೆ ನಿಮ್ಮ ಸಮಸ್ಯೆಗಳಿಗೆ ನಿವಾರಣೆಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಗಾಗಿ ಹೋಗುವುದಾದರೆ.. ನಿಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತೆರಳಬೇಕಾಗುತ್ತದೆ. ಈ ಮೂಲಕ ಮೊಬೈಲ್ ನಿಷೇಧಿಸಲಾಗಿದೆ.
ನಿವಾಸಕ್ಕೆ ಭೇಟಿ ನೀಡುವಂತ ಸಾರ್ವಜನಿಕರಿಗೆ ಸಿಎಂಗೆ ಸಮಸ್ಯೆಗೆ ಮನವಿ ಸಲ್ಲಿಸೋ ಜೊತೆಗೆ, ಸಿಎಂ ಜೊತೆಗೆ ಪೋಟೋ ತೆಗೆದುಕೊಳ್ಳೋದಕ್ಕೆ ಮುಂದಾಗುತ್ತಿದ್ದಾರೆ. ಈ ಕುರಿತು ಬೊಮ್ಮಾಯಿಯವರ ಆರ್ ಟಿ ನಗರ ನಿವಾಸದ ಮುಂದೆ ಬೋರ್ಡ್ ಕೂಡ ಹಾಕಲಾಗಿದ್ದು, ಸಿಎಂ ನಿವಾಸದೊಳಗೆ ಬರುವಂತ ಸಾರ್ವಜನಿಕರಿಗೆ ಸಿಎಂ ಭೇಟಿಗೆ ಬರುವಂತವರು ಮೊಬೈಲ್ ತರುವಂತಿಲ್ಲ. ಈ ಆದೇಶದಿಂದಾಗಿ ಪೊಲೀಸರು ಪ್ರತಿಯೊಬ್ಬರನ್ನು ತಪಾಸಣೆ ಮಾಡಿ, ಒಳಗೆ ಬಿಡುತ್ತಿದ್ದು, ಮೊಬೈಲ್ ತಂದವರನ್ನು ವಾಪಾಸ್ ಕಳಿಸುತ್ತಿದ್ದಾರೆ.

Related