ಹೆಚ್.ಡಿ.ಕೆ. ರಾಜಕೀಯ ಲಾಭದ ಆರೋಪ

ಹೆಚ್.ಡಿ.ಕೆ. ರಾಜಕೀಯ ಲಾಭದ ಆರೋಪ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿರವರ ಆಧಾರ ರಹಿತ ಆರೋಪವನ್ನು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಹೊರಿಸುವ ಮೂಲಕ ರಾಜಕೀಯ ಲಾಭಕ್ಕೆ ಯತ್ನಿಸುತ್ತಿದ್ದಾರೆ. ಇವರ ಹೇಳಿಕೆ ಹಾಗೂ ಅಸಂಸದೀಯ ಪದ ಬಳಕೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.

ಯಡಿಯೂರಪ್ಪ ಆಪ್ತರ ಮೇಲೆ ಐಟಿ ದಾಳಿ ನಡೆದರೆ ಅದಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರೇ ಕಾರಣ ಎಂಬುವ ಎಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಗಮನಿಸಿದರೆ, ಎಚ್.ಡಿ ಕುಮಾರಸ್ವಾಮಿಗೆ ಸೂಕ್ತವಾದ ತಿಳುವಳಿಕೆ ಜನರು ಹಾಗೂ ಮಾಹಿತಿ ಇಲ್ಲ ಎಂಬುದು ಬಹಿರಂಗವಾಗುತ್ತಿದೆ.

ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಅನಾವಶ್ಯಕವಾಗಿ ಇಂತಹ ಹೇಳಿಕೆ ಹಾಗೂ ಪದ ಬಳಸಿರುವುದು ಗಮನಿಸಿದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವುದು ಅನುಮಾನವಾಗಿದೆ.

ಕುಮಾರಸ್ವಾಮಿ ಬಳಸಿರುವ ಪದ ದೊಣ್ಣೆ ನಾಯಕ, ಪುಟ್ಗೋಸಿ. ಇದು ಯಾರಿಗೆ ಅನ್ವಯಿಸಬೇಕು? ಅವರ ಪಕ್ಷಕ್ಕೆ ಅವರಿಗೆ ಅನ್ವಯವಾಗುತ್ತದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರನ್ನ ಚುನಾವಣೆಗೆ ಇಳಿಸಿ ಬಿಜೆಪಿಗೆ ಬೆಂಬಲಿಸುತ್ತಿರುವ ಕುಮಾರಸ್ವಾಮಿಯ ರಾಜಕೀಯ ನೀತಿ ಎಲ್ಲರಿಗೂ ತಿಳಿದಿದೆ.

ಪ್ರತಿ ಹಂತದಲ್ಲೂ ರಾಜಕೀಯ ಲಾಭಕ್ಕೆ ಮುಂದಾಗಿರುವ ಕುಮಾರಸ್ವಾಮಿ ನಡೆ ಹಾಗೂ ಅವರ ಹೇಳಿಕೆ ಅತ್ಯಂತ ಕೀಳು ಮಟ್ಟದ್ದು. ಇಂತಹ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದು ರಾಜ್ಯಕ್ಕೆ ಅಪಮಾನ. ಕೂಡಲೇ ಕ್ಷಮೆ ಕೋರಬೇಕು ಎಂದು ಪ್ರತಿಭಟನೆಯನ್ನು ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನಡೆಸಲಾಯಿತು.

ಈ ಸಂದರ್ಭದಲ್ಲಿ ಕವಿಕಾ ಮಾಜಿ ಅಧ್ಯಕ್ಷ ಎಸ್. ಮನೋಹರ್, ಜಿ ಜನಾರ್ಧನ್, ಎ ಆನಂದ್ ಪ್ರಕಾಶ್ ಸುಧಾಕರ್, ನವೀನ್ ಪುಟ್ಟರಾಜ, ಮಹೇಶ್ ವಾಸು, ಮಾಧವ ಶ್ರೀಮತಿ ಗೀತಾ, ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

Related