ಆರೋಗ್ಯ ಸುಧಾರಣೆಗೆ ಬೇಕು ಬಟರ್ ಫ್ರೂಟ್

ಆರೋಗ್ಯ ಸುಧಾರಣೆಗೆ ಬೇಕು ಬಟರ್ ಫ್ರೂಟ್

ಆರೋಗ್ಯ ಸುಧಾರಿಸಿಕೊಳ್ಳಲು ವಿವಿಧ ಬಗೆಯ ಹಣ್ಣುಗಳನ್ನು ನಾವು ಸೇವಿಸುತ್ತೇವೆ. ಅದರಲ್ಲೂ ಬಟರ್ ಫ್ರೂಟ್ ಹಣ್ಣು ನಮ್ಮ ದೇಹಕ್ಕೆ ಬೇಕಾದ ಎಲ್ಲ ರೀತಿಯ ಅಂಶಗಳನ್ನು ಒದಗಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಚರ್ಮದ ಸಮಸ್ಯೆಯಿಂದ ಹಿಡಿದು ಕೂದಲಿನ ಸಮಸ್ಯೆಯನ್ನು ನಿವಾರಿಸುವ ಶಕ್ತಯನ್ನು ಈ ಬಟ್ಟರ್ ಫ್ರೂಟ್ ಹೊಂದಿದೆ. ಇನ್ನು ಬಟರ್ ಫ್ರೂಟ್ ಹಣ್ಣನ್ನು ಜ್ಯೂಸ್ ಮಾಡಿ ಸೇವಿಸಿದರೆ ನಮ್ಮ ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತದೆ.

ಚರ್ಮ ರಕ್ಷಣೆ : ಬಟರ್ ಫ್ರೂಟ್ ನಲ್ಲಿ ಇರುವಂತಹ ಪೋಷಕಾಂಶಗಳು ಚರ್ಮದ ಆರೋಗ್ಯಕ್ಕೆ ತುಂಬಾ ಲಾಭಕಾರಿ. ಒಣ, ಒಡೆದ ಮತ್ತು ಹಾನಿಗೀಡಾಗಿರುವಂತಹ ಚರ್ಮವನ್ನು ಇದು ಸರಿಪಡಿಸುವುದು. ಇಂದಿನ ಕೆಲವೊಂದು ಸೌಂದರ್ಯ ಉತ್ಪನ್ನಗಳು ಹಾಗೂ ಫೇಸ್ ಮಾಸ್ಕ್ ಗಳಲ್ಲಿ ಅವಕಾಡೊವನ್ನು ಬಳಕೆ ಮಾಡಿರುವರು. ಇದರಿಮದ ಚರ್ಮವು ತುಂಬಾ ಆರೋಗ್ಯಕಾರಿ ಮತ್ತು ಕಾಂತಿಯುವಾಗಿ ಹೊಳೆಯುವುದು.

ಅವಕಾಡೊದಲ್ಲಿ ವಿಟಮಿನ್ ಸಿ ಮತ್ತು ಇ ಸಮೃದ್ಧವಾಗಿದೆ. ಅಧಿಕ ಮಟ್ಟದ ಬೆಟಾ ಕ್ಯಾರೊಟಿನ್, ಬಿಸಿಲಿನಿಂದಾಗಿ ಯುವಿ ಕಿರಣಗಳಿಂದಾಗಿ ಆಗುವಂತಹ ಚರ್ಮದ ಉರಿಯೂತ ಕಡಿಮೆ ಮಾಡುವುದು.

ಜೀರ್ಣಕ್ರಿಯೆ ಸುಧಾರಣೆ : ಸಿಪ್ಪೆ ಹೊಂದಿರುವ ಅವಕಾಡೊದಲ್ಲಿ ನಾರಿನಾಂಶವು ಇದ್ದು, ಇದು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಧಾರಣೆ ಮಾಡುವುದು ಮತ್ತು ಮಲಬದ್ಧತೆ ನಿವಾರಣೆ ಮಾಡುವುದು.

ಮೂಳೆಗಳಿಗೆ ಬಲ: ಲುಥೆನ್ ಮತ್ತು ಜಿಯಾಕ್ಸಾಂಥಿನ್ ಅಂಶವು ಕಾರ್ಟಿಲೆಜ್ ದೋಷದ ಅಪಾಯ ಕಡಿಮೆ ಮಾಡುವುದು. ಅವಕಾಡೊದಲ್ಲಿ ಖನಿಜಾಂಶಗಳಾಗಿರುವಂತಹ ಸತು, ಪೋಸ್ಪರಸ್, ತಾಮ್ರ, ಕ್ಯಾಲ್ಸಿಯಂ ಮತ್ತು ಸೆಲೆನಿಯಂ ಇದೆ. ಹೀಗಾಗಿ ಇದು ಅಸ್ಥಿರಂಧ್ರತೆ ಸಮಸ್ಯೆಯನ್ನು ಕಡಿಮೆ ಮಾಡುವುದು ಮತ್ತು ಮೂಳೆಯ ಖನಿಜ ಸಾಂದ್ರತೆ ಹೆಚ್ಚಿಸುವುದು.

ಕಣ್ಣಿನ ದೃಷ್ಟಿ: ಬೆಟಾ ಕ್ಯಾರೊಟಿನ್ ಮತ್ತು ಆಂಟಿಆಕ್ಸಿಡೆಂಟ್ ಹೊಂದಿರುವಂತಹ ಅವಕಾಡೊ ಕಣ್ಣಿನ ದೃಷ್ಟಿ ಸುಧಾರಣೆ ಮಾಡಲು ನೆರವಾಗುವುದು.

ತೂಕ ಇಳಿಸಲು : ಅವಕಾಡೊದಲ್ಲಿ ಇರುವಂತಹ ನಾರಿನಾಂಶವು ತೂಕ ಇಳಿಸಲು ನೆರವಾಗುವುದು. 100 ಗ್ರಾಂ ಅವಕಾಡೊದಲ್ಲಿ 7 ಗ್ರಾಂನಷ್ಟು ನಾರಿನಾಂಶವಿದೆ ಇದರಲ್ಲಿ ಇರುವ ಬಹುಪರ್ಯಾಪ್ತ ಮತ್ತು ಏಕಪರ್ಯಾಪ್ತ ಕೊಬ್ಬು ತೂಕ ಹೆಚ್ಚಿಸಲು ಸಹಕಾರಿ.

ಖಿನ್ನತೆ ಅಪಾಯ ಕಡಿಮೆ ಮಾಡುವುದು: ಅವಕಾಡೊ ಹಣ್ಣಿನಲ್ಲಿ ಇರುವಂತಹ ಉನ್ನತ ಮಟ್ಟದ ಫಾಲಟೆ ಅಂಶವು ಖಿನ್ನತೆ ಅಪಾಯ ತಗ್ಗಿಸುವುದು ಮತ್ತು ಮೆದುಳಿನಲ್ಲಿ ಉತ್ತಮ ಭಾವನೆ ಉಂಟು ಮಾಡುವಂತಹ ಡೊಪಮೈನ್ ಮತ್ತು ಸೆರೊಟಿನ್ ರಾಸಾಯನಿಗಳನ್ನು ಬಿಡುಗಡೆ ಮಾಡುವುದು ಎಂದು ಹಲವಾರು ಅಧ್ಯಯನಗಳು

ಕೂದಲ ಸಮಸ್ಯ: ಕಂಡುಕೊಂಡಿವೆ. ಫಾಲಟೆಯು ಹೋಮೋಸಿಸ್ಟೈನ್ ಜಮೆ ಆಗುವುದನ್ನು ತಪ್ಪಿಸುವುದು. ಹೋಮೋಸಿಸ್ಟೈನ್ ಮೆದುಳಿಗೆ ಸರಿಯಾಗಿ ಪೋಷಕಾಂಶಗಳು ಸರಬರಾಜು ಆಗುವುದನ್ನು ತಪ್ಪಿಸುವುದು.

ಸಾಮಾನ್ಯವಾಗಿ ಎಲ್ಲರಲ್ಲೂ ತಲೆ ಕೂದಲು ಉದುರುವುದು ಕಂಡುಬರುತ್ತದೆ ಈ ಕೂದಲು ಉದುರುಕೆಯನ್ನು ತಡೆಗಟ್ಟಲು ನಾವು ವಾರಕ್ಕೆ ಎರಡು ಮೂರು ಸಾರಿಯಾದರೂ ಬಟರ್ ಫ್ರೂಟ್ ಜ್ಯೂಸ್ ಸೇವನೆ ಮಾಡಬೇಕು ಇದರಿಂದ ಕ್ರಮೇಣವಾಗಿ ನಮ್ಮ ಕೂದಲು ಉದುರುವುದು ಕಡಿಮೆಯಾಗುತ್ತದೆ.

Related