ರೈತರಿಗೆ ವರದಾನ

ರೈತರಿಗೆ ವರದಾನ

ಹಗರಿಬೊಮ್ಮನಹಳ್ಳಿ : ರಾಷ್ಟೀಯಾ ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಹಣಕಾಸಿ ವಿಷಯದಲ್ಲಿ ಗ್ರಾ.ಪಂ. ಪಿಡಿಒ ಇಲ್ಲವೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರುವುದು ಕೂಲಿ ಕಾರ್ಮಿಕರ ತಂಡದ ಜವಾಬ್ದಾರಿ ಆಗಿದೆ ಎಂದು ಜಿ.ಪಂ ಸಿಇಒ ಕೆ. ನಿತೀಶ್ ತಿಳಿಸಿದರು.

ತಾಲೂಕಿನ ಕಡ್ಲಬಾಳು, ಹನಸಿನೆಲ್ಕುದ್ರಿ, ಮಾಲವಿ, ಬೆಣಕಲ್ಲು ಇನ್ನಿತರ ಗ್ರಾ.ಪಂ ವ್ಯಾಪ್ತಿಯಲ್ಲಿ ಆಗಿರುವ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದ ಬದು ನಿರ್ಮಾಣ, ಕೃಷಿಹೊಂಡ ರೈತರಿಗೆ ವರದಾನವಾಗಿದ್ದು, ರೈತರು ತಮ್ಮ ಹೊಲದಲ್ಲಿ ಬದು ನಿರ್ಮಾಣ ಮಾಡಿಕೊಳ್ಳುವುದು, ಗಿಡ ಬೆಳೆಸುವುದರಿಂದ ಮಣ್ಣಿನ ಸವಕಳಿ ತಡೆಯಬಹುದು. ಕೃಷಿಹೊಂಡ ನಿರ್ಮಾಣದಿಂದ ಅಂತರ್ಜಲವನ್ನು ಹೆಚ್ಚಿಸಬಹುದು ಎಂದರು.

ತಾಲೂಕಿನ ಗ್ರಾ.ಪಂ ವ್ಯಾಪ್ತಿಯಲ್ಲಿ ನಿಗದಿತ ದಿನಗಳನ್ನು ಪೂರೈಸಿದ್ದು, ಹೆಚ್ಚುವರಿಯಾಗಿ 100 ದಿನಗಳ ಕಾಲ ಕೆಲಸ ನೀಡಲು ಕೂಲಿ ಕಾರ್ಮಿಕರಿಗೆ ನಿಗದಿಪಡಿಸಿದೆ 2,75ರಿಂದ 600 ರೂ. ಕೂಲಿ ಹಣವನ್ನು ಹೆಚ್ಚಿಸಬೇಕು ಎಂದು ಬೇಡಿಕೆ ಇಟ್ಟರು. ಸ್ಪಂದಿಸಿದ ಅಧಿಕಾರಿ, ಬೇಡಿಕೆಗಳ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸುವ ಭರವಸೆ ನೀಡಿದರು. ಕೊರೋನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ನೀಡಬೇಕಾಗುತ್ತದೆ ಎಂದು ಕೂಲಿ ಕಾರ್ಮಿಕರಿಗೆ ಜಾಗೃತಿ ಮೂಡಿಸಿದರು.

Related