ವಲಸೆ ಕಾರ್ಮಿಕರಿಗೆ ವರದಾನ

ವಲಸೆ ಕಾರ್ಮಿಕರಿಗೆ ವರದಾನ

ಮುದ್ದೇಬಿಹಾಳ : ಗುಳೇ ಹೋದ ಮಹಾರಾಷ್ಟ ಮತ್ತು ಗೋವಾ ಕೂಲಿ ಕಾರ್ಮಿಕರಿಗೆ ದುಡಿಯಲು ಅವರ ಗ್ರಾಮದಲ್ಲಿ ಕೆಲಸ ಕೊಡುವ ಮಹತ್ವದ ಯೋಜನೆಯನ್ನು ಸರಕಾರ ಅನುಷ್ಠಾನಗೊಳಿಸಿದೆ. ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ ಸಲಹೆ ನೀಡಿದರು.

ತಾಲೂಕಿನ ಕವಡಿಮಟ್ಟಿ  ಗ್ರಾಪಂ ವ್ಯಾಪ್ತಿಯಲ್ಲಿ ರೈತ ದೇವೇಂದ್ರಪ್ಪ ಶಿ. ಮೇಟಿ ಅವರ  ಹೊಲದಲ್ಲಿ ಬಂದು ನಿರ್ಮಾಣ ಅಭಿಯಾನ ಮಾಸಾಚರಣೆಯ ಅಂಗವಾಗಿ ಬಂದು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ನಿಮ್ಮೂರಲ್ಲೇ ನಿಮಗ 100 ದಿನಗಳ ಕೆಲಸ ಕೊಟ್ಟು ಒಬ್ಬರಿಗೆ 275 ಕೂಲಿಯನ್ನು ನೀಡಲಾಗುತ್ತಿದೆ ಎಂದರು.

ಪ್ರತಿ ಹೊಲದಲ್ಲಿ ಬಂದು ರೈತರ ಮುಖದಲ್ಲಿ ನಗು, ಪ್ರತಿ ಕುಟುಂಬಕ್ಕೂ ಕೆಲಸ ಪ್ರತಿ ಹೊಲಕ್ಕೂ ಬದು ಎಂಬ ಯೋಜನೆಯಂತೆ ಎನ್‌ಆರ್‌ಇಜಿ  ಯೋಜನೆಯಡಿ ಮೇ.19ರಿಂದ ಜೂ.16ರವರೆಗೆ ರೈತರ ಜಮೀನಿನಲ್ಲಿ ಬದು ನಿರ್ಮಾಣ ಮಾಡಿಕೊಡಲಾಗುತ್ತಿದೆ. ಇದರಿಂದ ಅನ್ನದಾತನ ಹಾಗೂ ವಲಸೆ ಹೋಗಿದ್ದ ಕಾರ್ಮಿಕರ ನೆರವಿಗೆ ಸರಕಾರ ಮಹತ್ವದ ಯೋಜನೆಯನ್ನು ರೂಪಿಸಿದೆ.

 

Related