ಇಲ್ಲವಾಯಿತೇ ಈ ಆಸ್ಪತ್ರೆಗೆ ಮಾನವೀಯತೆ?

ಇಲ್ಲವಾಯಿತೇ ಈ ಆಸ್ಪತ್ರೆಗೆ ಮಾನವೀಯತೆ?

ಬೆಳಗಾವಿ : ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲವೂ ಸರಿಯಾಗಿದೆ. ಸೋಂಕಿತರ ಚಿಕಿತ್ಸೆಗೆ ಎಲ್ಲ ವ್ಯವಸ್ಥೆ ಮಾಡಿದ್ದೇವೆ ಎಂದು ಜಿಲ್ಲಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ ಸಮರ್ಥನೆ ಮಾಡಿಕೊಂಡ ಬೆನ್ನಲ್ಲಿಯೇ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಮೊತ್ತೊಂದು ಘಟನೆ ನಡೆದಿದೆ. ಯುವತಿಯೊಬ್ಬಳು(30) ಆಸ್ಪತ್ರೆಯಲ್ಲಿ ನರಳಾಡಿ ಜೀವ ಬಿಟ್ಟಿರುವ ಅಮಾನವೀಯ ಘಟನೆಗೆ ಭೀಮ್ಸ್ ಆಸ್ಪತ್ರೆ ಮತ್ತೊಮ್ಮೆ ಸಾಕ್ಷಿಯಾಗಿದೆ.

ಅಥಣಿ ತಾಲ್ಲೂಕಿನ 65 ವರ್ಷದ ವೃದ್ಧನೊಬ್ನ ನರಳಿ ಜೀವ ಬಿಟ್ಟಿದ್ದರು. ಇದೀಗ ಯುವತಿ ಅದೇ ರೀತಿ ಮೃತಪಟ್ಟಿದ್ದು ಭೀಮ್ಸ್ ಬೆಳಗಾವಿಯ ಸರ್ಕಾರಿ ದವಾಖಾನೆ ಅಲ್ಲ ಅದೊಂದು ಕಸಾಯಿ ಖಾನೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.

ಮೃತಪಟ್ಟ ಯುವತಿ ಕಾಗವಾಡ ತಾಲೂಕಿನ ಗ್ರಾಮವೊಂದವರೆಂದು ತಿಳಿದು ಬಂದಿದೆ. ತೀವ್ರ ಮಧುಮೇಹದಿಂದ ಬಳಲುತ್ತಿದ್ದಳು. ಕೋವಿಡ್ ಟೆಸ್ಟ್ ಮಾಡಿದಾಗ ಕೊರೊನಾ ದೃಢವಾಗಿತ್ತು. ಬಳಿಕ ಕೊವಿಡ್ ವಾರ್ಡ್‍ಗೆ ಶಿಫ್ಟ್ ಮಾಡಲಾಗಿತ್ತು. ಯುವತಿ ಮಧುಮೇಹದಿಂದ ಬಳಲುತ್ತಿದ್ದರೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

Related