ಅಲ್ಲು ಫ್ಯಾನ್ಸ್ ಗೆ ಪುಷ್ಪ ಚಿತ್ರ ಕುರಿತು ಬಿಗ್ ಅಪ್ಡೇಟ್..!

  • In Cinema
  • July 11, 2022
  • 230 Views
ಅಲ್ಲು ಫ್ಯಾನ್ಸ್ ಗೆ ಪುಷ್ಪ ಚಿತ್ರ ಕುರಿತು ಬಿಗ್ ಅಪ್ಡೇಟ್..!

ಅಲ್ಲು ಅರ್ಜುನ್ ಹಾಗೂ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ‘ಪುಪ್ಪ 2‘ ಚಿತ್ರದ ಕುರಿತು ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯಿದೆ. ಇದರ ನಡುವೆ ಚಿತ್ರದ ಕುರಿತು ಬಿಗ್​ ಅಪ್​ಡೇಟ್​ ಒಂದು ಹೊರಬಿದ್ದಿದೆ.

ನಿರ್ದೇಶಕ ಸುಕುಮಾರ್, ನಟ ಅಲ್ಲು ಅರ್ಜುನ್, ನ್ಯಾಶನಲ್ ಕ್ರಶ್ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿಬಂದ ಪುಷ್ಪ ಸಿನಿಮಾ ಸಂಚಲನ ಮೂಡಿಸಿತ್ತು. ಸೆಲೆಬ್ರಿಟಿಗಳಿಂದ ಹಿಡಿದು ಪ್ರೇಕ್ಷಕರವರೆಗೆ ಎಲ್ಲರೂ ಪುಷ್ಪಾ ರಾಜ್ ಅವರ ಶೈಲಿಯನ್ನು ದೇಶಾದ್ಯಂತ ಅನುಕರಿಸಲು ಪ್ರಾರಂಭಿಸಿದ್ದರು. ಅನಸೂಯಾ, ಸುನೀಲ್, ಫಹದ್ ಫಾಜಿಲ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಇನ್ನು, ‘ಪುಷ್ಪಾ 2ನೇ ಭಾಗದಲ್ಲಿ ಈ ಚಿತ್ರತಂಡವೇ ಮುಂದುವರಿಯಲಿದೆ. ಇದೀಗ ಪುಷ್ಪ ದಿ ರೂಲ್ ಎರಡನೇ ಭಾಗಕ್ಕಾಗಿ ಪ್ರೇಕ್ಷಕರು ಮತ್ತು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


ಮಾರ್ಚ್ ತಿಂಗಳಲ್ಲಿ ಪ್ರಾರಂಭವಾಗಬೇಕಿದ್ದ ‘ಪುಷ್ಪಾ ದಿ ರೂಲ್’ ಈವರೆಗೂ ಶೂಟಿಂಗ್ ಆರಂಭಿಸಿಲ್ಲ. ಆದರೆ ಇದೀಗ ಕೊನೆಗೂ ‘ಪುಷ್ಪಾ ದಿ ರೂಲ್’ ಸೆಟ್ಟೇರಲಿದೆ ಎಂಬ ಅಪ್ಡೇಟ್ ಹೊರಬಿದ್ದಿದೆ. ಮೂಲಗಳ ಪ್ರಕಾರ ಆಗಸ್ಟ್ ಮೂರನೇ ವಾರದಿಂದ ಪುಷ್ಪ 2 ಸಿನಿಮಾ ಶೂಟಿಂಗ್ ಆರಂಭಿಸುವ ಸಾಧ್ಯತೆ ಇದೆಯಂತೆ. ಚಿತ್ರತಂಡದಿಂದ ಬಂದಿರುವ ಮಾಹಿತಿ ಪ್ರಕಾರ ಈ ಬಾರಿ ಯಾವುದೇ ವಿಳಂಬವಾಗುವುದಿಲ್ಲ ಎನ್ನಲಾಗಿದೆ.

Related