ಪ್ರಬಾಸ್ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್..!

  • In Cinema
  • July 16, 2022
  • 330 Views
ಪ್ರಬಾಸ್ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್..!

ಪ್ರಭಾಸ್ ಅಭಿನಯದ ಅದ್ಧೂರಿ ಸಿನಿಮಾ ಆದಿಪುರುಷ್​ ಚಿತ್ರವನ್ನು ಬಾಲಿವುಡ್ ನಿರ್ದೇಶಕ ಓಂ ರಾವುತ್ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಈ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿದೆ.

ತೆಲುಗಿನ ಡಾರ್ಲಿಂಗ್ ಪ್ರಭಾಸ್ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅವರ ಬಹುನಿರೀಕ್ಷಿತ ‘ಆದಿಪುರುಷ್‘ ಚಿತ್ರದ ಕುರಿತು ಇದೀಗ ಚಿತ್ರತಂಡ ದೊಡ್ಡ ಅಪ್​ಡೇಟ್​ ಒಂದನ್ನು ನೀಡಿದ್ದು, ಡಾರ್ಲಿಂಗ್ ಅಭಿಮಾನಿಗಳಿಗೆ ಸಂತಸ ತಂದಿದೆ.

ಬಾಲಿವುಡ್ ನಿರ್ದೇಶಕ  ಓಂ ರಾವುತ್ ನಿರ್ದೇಶಿಸುತ್ತಿರುವ ಪ್ರಭಾಸ್ ನಟನೆಯ ಬಿಗ್​ ಬಜೆಟ್​ ಚಿತ್ರ ಆದಿಪುರುಷ್​ ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿದೆ.

500 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ‘ಆದಿಪುರುಷ’ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಕೃತಿ ಸನೊನ್ ನಟಿಸುತ್ತಿದ್ದಾರೆ. ಸೈಫ್ ಅಲಿ ಖಾನ್, ದೇವದತ್ತ ನಾಗೆ, ಸನ್ನಿ ಸಿಂಗ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Related