ಡಿಕೆ ಸುರೇಶ್ ಪರವಾಗಿ ಅಕ್ಕತಂಗಿಯರ ಭರ್ಜರಿ ಮತ ಬೇಟೆ

ಡಿಕೆ ಸುರೇಶ್ ಪರವಾಗಿ ಅಕ್ಕತಂಗಿಯರ ಭರ್ಜರಿ ಮತ ಬೇಟೆ

ಬೆಂಗಳೂರು: ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಿಕೆ ಸುರೇಶ್ ಅವರ ಪರವಾಗಿ ಇಂದು ಬುಧವಾರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪತ್ನಿ ಶ್ರೀಮತಿ ಡಿಕೆ ಉಷಾ ಮತ್ತು ಕುಣಿಗಲ್ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ರಂಗನಾಥ್ ಅವರ ಪತ್ನಿ ಆಗಿರುವಂತ ಶ್ರೀಮತಿ ಸುಮಾ ರಂಗನಾಥ್ ಅವರು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆಮನೆಗೆ ತೆರಳಿ ಮತ ಪ್ರಚಾರ ನಡೆಸಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಉಷಾ ಮತ್ತು ಸುಮಾರಿಗೆ ಆರತಿ ಮಾಡುವ ಮೂಲಕ ಅವರನ್ನು ಬರಮಾಡಿಕೊಂಡರು.

Related