ಟೆನಿಸ್‌ ತಾರೆಗೆ ಪತಿಯಿಂದ ಬಿಗ್ ಶಾಕ್!

ಟೆನಿಸ್‌ ತಾರೆಗೆ ಪತಿಯಿಂದ ಬಿಗ್ ಶಾಕ್!

ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟಿಗ ಶೋಯಬ್ ಮಲ್ಲಿಕ್ ಅವರನ್ನು ವಿವಾಹವಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ವಿಚ್ಛೇದನಕ್ಕೆ ಬಂದು ನಿಂತಿದೆ ಎಂದು ಹೇಳಲಾಗಿತ್ತು.

ಆದರಿಗ ಈ ಎಲ್ಲಾ ಊಹಾಪೋಹಗಳಿಗೆ ಸಾನಿಯಾ ಮಿರ್ಜಾ ಪತಿ ಶೋಯಬ್ ಮಲ್ಲಿಕ್ ಅವರು ತೆರೆಯಲಿದಿದ್ದಾರೆ. ಹೌದು, ಸಾನಿಯಾ ಪತಿ ಈಗ ಮತ್ತೊಂದು ಮದುವೆಯಾಗಿದ್ದು ಸಾನಿಯಾ ಮಿರ್ಜಾ ಗೆ ಬಿಗ್ ಶಾಕ್ ನೀಡಿದ್ದಾರೆ.

ಪಾಕ್ ಕ್ರಿಕೆಟರ್ ಶೋಯೆಬ್ ಮಲಿಕ್ ಅವರು ಯಾವುದೇ ಸೂಚನೆಯೇ ನೀಡದೆ ಮದುವೆಯಾಗುತ್ತಿರುವುದು ಭಾರೀ ಅಚ್ಚರಿ ಮೂಡಿಸಿದ್ದು, ಇದರಿಂದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಶಾಕ್‌ಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ವಿಚ್ಛೇದನದ ಬಗ್ಗೆ ದೀರ್ಘಕಾಲದಿಂದ ಊಹಾಪೋಹಗಳು ಇದ್ದವು. ಈ ಮಧ್ಯೆ ಶೋಯೆಬ್ ಮಲಿಕ್ ತನ್ನ ವಿವಾಹ ಸಮಾರಂಭದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ಇಂದು (ಜ. 20) ಸಾಮಾಜಿಕ ಮಾಧ್ಯಮದಲ್ಲಿ ಪಾಕಿಸ್ತಾನಿ ಕ್ರಿಕೆಟ್ ಆಟಗಾರ ಶೋಯೆಬ್ ಮಲಿಕ್ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದಕ್ಕೂ ಮೊದಲು, ಬುಧವಾರದಂದು ಸಾನಿಯಾ ಮಿರ್ಜಾ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು, ಇದರಿಂದಾಗಿ ಅವರ ಮತ್ತು ಶೋಯೆಬ್ ಮಲಿಕ್ ನಡುವೆ ವಿಚ್ಛೇದನದ ವದಂತಿಗಳು ತೀವ್ರಗೊಂಡಿತ್ತು.

ಅಂದಹಾಗೆ ಇದು ಶೋಯೆಬ್‌ ಮಲಿಕ್‌ಗೆ ಮೂರನೇ ಮದುವೆಯಾಗಿದ್ದು, ಸಾನಿಯಾ ಮಿರ್ಜಾಗೆ ಹೇಳದೇ ಮದುವೆಯಾದಂತೆ ಮೊದಲ ಹೆಂಡತಿಗೂ ಹೇಳದೆ ಸಾನಿಯಾ ಮಿರ್ಜಾರನ್ನು ಮದುವೆಯಾಗಿದ್ದಾನೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರಿಂದ ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಬಿಗ್ ಶಾಕ್ ನೀಡಿದಂತಾಗಿದೆ.

Related