ಲಾಕ್‌ಡೌನ್ ಅವಶ್ಯಕತೆ ಇಲ್ಲಾ

ಲಾಕ್‌ಡೌನ್ ಅವಶ್ಯಕತೆ ಇಲ್ಲಾ

ಬೆಳಗಾವಿ: ಜಿಲ್ಲೆಯ ಮೂವರು ಸಚಿವರು ತಮ್ಮ ತಮ್ಮ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ. ಹೀಗಾಗಿ ಕೊರೋನಾ ಸಂದರ್ಭದಲ್ಲಿ  ಜಿಲ್ಲಾಡಳಿತ ನಿಯಂತ್ರಣ ತಪ್ಪುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಗಂಭೀರವಾಗಿ ಆರೋಪಿಸಿದರು.  ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ಸಚಿವರಾಗಿದ್ದ ವೇಳೆ ಜಿಲ್ಲಾಡಳಿತ, ಕಾರ್ಪೋರೇಷನ್ ಹಾಗೂ ಮಹಾನಗರ ಪಾಲಿಕೆ ಕಚೇರಿಗಳಲ್ಲಿ ನಿರಂತರವಾಗಿ ಸಭೆ ನಡೆಸಿ ಜನರ ಸಮಸ್ಯೆ ಆಲಿಸುತ್ತಿದ್ದೆವು. ಜಿಲ್ಲೆಗೆ ಹೆಚ್ಚಿನ ಗಮನ ನೀಡುತ್ತಿದ್ದೆವು. ಇದೀಗ ತ್ರಿವಳ ಸಚಿವರಿದ್ದರು ತಮ್ಮ ತಮ್ಮ ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆಂದು ವಾಗ್ದಾಳಿ ನಡೆಸಿದರು.

ಜಿಲ್ಲೆಯಲ್ಲಿ  ಕೊರೋನಾ ಸೋಂಕು ಹೆಚ್ಚಲಿದೆ. ಜಿಲ್ಲಾ ಆಸ್ಪತ್ರೆಯಲ್ಲಿ  ಬೆಡ್ ಕೊರತೆ ಇದೆ. ಹಾಸ್ಟೆಲ್ ಅಥವಾ ಸರ್ಕಾರಿ ಕಟ್ಟಡಲ್ಲಿ ಪರ್ಯಾಯವಾಗಿ ಆಸ್ಪತ್ರೆ ಆರಂಭಿಸಿ ಮೂಲಭೂತ ಸೌಕರ್ಯ ಕಲ್ಪಸಿಬೇಕು ಎಂದು ಸಲಹೆ ನೀಡಿದರು.

ಲಾಕ್ ಡೌನ್ ಅವಶ್ಯಕತೆ ಇರಲಿಲ್ಲ:

ಕಳೆದ ಮೂರು ತಿಂಗಳಿನಿಂದ ಲಾಕ್ ಡೌನ್ ನಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಉದ್ಯೋಗವಿಲ್ಲದೇ ಜೀವನ ದೂಡುವುದು ಕಷ್ಟವಾಗಿದೆ.  ಅಂತಹದರಲ್ಲಿ ಮತ್ತೆ ೧೦ ಜಿಲ್ಲೆ ಬೆಳಗಾವಿಯ ೫ ತಾಲೂಕುಗಳನ್ನು ಲಾಕ್ ಡೌನ್ ಮಾಡಿದ್ದಾರೆ.  ಕರ್ನಾಟಕದಲ್ಲಿ ನಿತ್ಯ ಸಾವಿರಕ್ಕೂ ಹೆಚ್ಚು ಕೇಸ್‌ಗಳು ಬರುತ್ತಿವೆ. ಯಾರಿಗೆ ಸೋಂಕು ತಗುಲಿದೆ ಅವರನ್ನು ನಿಯಂತ್ರಣ ಮಾಡುವ ಕೆಲಸವನ್ನು  ಸರ್ಕಾರ ಮಾಡಬೇಕು.  ಬೆಳಗಾವಿ ಜಿಲ್ಲೆಯ ಗೋಕಾಕ್, ಮೂಡಲಗಿ ತಾಲೂಕುಗಳಲ್ಲಿ  ಲಾಕ್‌ಡೌನ್ ಅವಶ್ಯಕತೆ ಇರಲಿಲ್ಲ. ಆದೇಶ ಮಾಡುವುದು  ಸುಲಭ. ಆದ್ರೆ ದೊಡ್ಡ ತಾಲೂಕುಗಳನ್ನು ನಿಯಂತ್ರಣ ಮಾಡುವುದು ಕಷ್ಟ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು. ಜನರು  ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನವಿ ಮಾಡಬೇಕು ಎಂದರು.

ಕೋವಿಡ್ ಕಿಟ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಸತ್ಯ. ಈ ಕುರಿತು ಈಗಾಗಲೇ ನಮ್ಮ ಪಕ್ಷದ ನಾಯಕರು ದಾಖಲೆ ಬಿಡುಗಡೆ ಮಾಡಿದ್ದಾರೆ.  ಕಿಟ್ ಖರೀದಿಯಲ್ಲಿ ಡಬಲ್ ಬಿಲ್ ಮಾಡಿದ್ದಾರೆಂದು ಆರೋಪಿಸಿದರು.

Related