ಮುಖ ಬೆಳ್ಳಗಾಗಬೇಕೆ? ಈ ಸೆರಮ್ ಬಳಸಿ

ಮುಖ ಬೆಳ್ಳಗಾಗಬೇಕೆ? ಈ ಸೆರಮ್ ಬಳಸಿ

ಹೆಣ್ಣು ಮಕ್ಕಳಿಗೆ ಸೌಂದರ್ಯವೇ ಗಣಿ. ಸೌಂದರ್ಯದ ಜೊತೆಗೆ ಮುಖದ ಕಾಂತಿಯನ್ನು ಕಾಪಾಡಿಕೊಳ್ಳಬೇಕು. ಬೆಳ್ಳಗೆ ಕಾಣಬೇಕೆಂದು ಹವಣಿಸುತ್ತಾರೆ. ಹಾಗಾಗಿ ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ರೀತಿಯ ಕ್ರೀಮ್, ಸೆರಮ್ ಬಳಕೆ ಮಾಡಿ ಯಾವುದೇ ಫಲಿತಾಂಶ ಸಿಗದಿದ್ದಾಗ ಬೇಸರಿಕೊಳ್ಳುತ್ತಾರೆ.

ಹಾಗಾಗಿ ನಾವು ಇವತ್ತು ಕಡಿಮೆ ಖರ್ಚಿನಲ್ಲಿ ಬೀಟ್ ರೂಟ್ ಸೆರಮ್ ಮಾಡುವ ವಿಧಾನ ಪರಿಚಯಿಸಿದ್ದೇವೆ. ಇದು ಮನೆಯಲ್ಲೇ ತಯಾರು ಮಾಡಿಕೊಳ್ಳುವುದರಿಂದ ಅಡ್ಡ ಪರಿಣಾಮಗಳು ಕಡಿಮೆ. ಜೊತೆಗೆ ಪ್ರತಿದಿನ ಬಳಸುತ್ತಿದ್ದರೆ ತ್ವಚೆ ಹೊಳಪು ಕೂಡ ಹೆಚ್ಚಾಗುವುದು.

ಬೀಟ್‍ರೂಟ್ ತ್ವಚೆಗೆ ಏಕೆ ಒಳ್ಳೆಯದು?
ಬೀಟ್‍ರೂಟ್‍ನಲ್ಲಿ ಪ್ರೋಟೀನ್, ಪೊಟ್ಯಾಷಿಯಂ, ವಿಟಮಿನ್ ಎ, ವಿಟಮಿನ್ ಡಿ, ಸಿ, ವಿಟಮಿನ್ ಬಿ-6, ಕಬ್ಬಿಣದಂಶವಿದೆ. ಬೀಟ್‍ರೂಟ್ ಪ್ರತಿದಿನ ಬಳಸುತ್ತಿದ್ದರೆ ಕೆನ್ನೆ ಗುಲಾಬಿ ರಂಗು ಪಡೆಯುವುದಲ್ಲದೆ ಮೊಡವೆ ಕೂಡ ಕಡಿಮೆಯಾಗುತ್ತದೆ.

ಸೆರಮ್ ಮಾಡುವುದು ಹೇಗೆ?
ಬೀಟ್‍ರೂಟ್ ತುರಿದು ಅದನ್ನು ಒಂದು ಬಿಳಿ ಶುದ್ಧ ಬಟ್ಟೆಯಲ್ಲಿ ಹಾಕಿ ಹಿಂಡಿ ಆ ರಸವನ್ನು ಒಂದು ಬೌಲ್‍ಗೆ ಹಾಕಿ. ಈಗ ರೋಸ್‍ವಾಟರ್, ಲೋಳೆಸರ ರಸ, ಹಾಲು, ವಿಟಮಿನ್ ಇ ಮಾತ್ರೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಇದನ್ನು ಗಾಳಿಯಾಡದ ಗಾಜಿನ ಡಬ್ಬದಲ್ಲಿ ಹಾಕಿ ಫ್ರಿಡ್ಜ್‍ನಲ್ಲಿ ಇಟ್ಟು 10-15 ದಿನ ಇಟ್ಟು ಬಳಸಬಹುದು.

Related