ವಾಹನ ಸವಾರರೇ ಎಚ್ಚರ! ಬೀಳ್ತಾವೆ ಲಾಠಿ ಏಟು

ವಾಹನ ಸವಾರರೇ ಎಚ್ಚರ! ಬೀಳ್ತಾವೆ ಲಾಠಿ ಏಟು

ಬಸವನಬಾಗೇವಾಡಿ: ಕೋರೋನಾ ವೈರಸ್ ಹರಡದಂತೆ ಮುಂಜಾಗ್ರತ ಕ್ರಮವಾಗಿ ದ್ವಿಚಕ್ರ ವಾಹನದಲ್ಲಿ ಒಬ್ಬರೇ ಮಾಸ್ಕ್ ಧರಿಸಿಕೊಂಡು ಸಂಜೆ 7ರಿಂದ ಬೆಳಿಗ್ಗೆ 7 ಗಂಟೆಯವರೆಗೆ ಸಂಚರಿಸಬೇಡಿ, ಅಂಗಡಿಗಳನ್ನು ಬಂದ್ ಮಾಡಿ, ಗುಂಪು ಗುಂಪಾಗಿ ನಿಲ್ಲಬೇಡಿ, ಅನಾವಶ್ಯಕವಾಗಿ ತಿರುಗಾಡಬೇಡಿ. ಈ ಸಮಯದಲ್ಲಿ ಮನೆಯಲ್ಲಿರಿ…ಈ ಮಾತುಗಳು ಕೇಳಿ ಬರುತ್ತಿರುವುದು ಆರಕ್ಷಕನಿಂದಲ್ಲ.

ಸಾರ್ವಜನಿಕರು ರಸ್ತೆಗೆ ಇಳಿಯದಂತೆ ಪಟ್ಟಣದ ಡಿವೈಎಸ್‍ಪಿ ಶಾಂತವೀರ ಅವರು ಶ್ರೀ ಬಸವೇಶ್ವರ ವೃತ್ತದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಸಂಜೆ 5 ಗಂಟೆಗೆ ವೃತ್ತದಲ್ಲಿ ಸವಾರರ ಬಳಿ ತೆರಳಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಖಡಕ್ಕಾಗಿ ಎಚ್ಚರಿಕೆ ನೀಡುತ್ತಿದ್ದಾರೆ.

ಇವರು 7 ಗಂಟೆ ಸಮೀಪವಾಗುತ್ತಿದಂತೆ ಪಟ್ಟಣದ ವೃತ್ತದಲ್ಲಿ ಠಾಣೆಯ ಆರಕ್ಷಕರು ಸಿಬ್ಬಂದಿ ಸೇರಿದಂತೆ ಎಲ್ಲ ಸಿಬ್ಬಂದಿಗಳನ್ನು ಒಗ್ಗೂಡಿಸಿಕೊಂಡು ವಾಹನ ಸವಾರರಿಗೆ ಲಾಠಿ ಏಟು ಹಾಗೂ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಎಚ್ಚರ ವಹಿಸುತ್ತಿರುವುದು ಶಾಂತವೀರ ಅವರ ಕರ್ತವ್ಯ ಪ್ರಜ್ನೆಗೆ ಸಾಕ್ಷಿಯಾಗಿದೆ.

ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಸಾರ್ವಜನಿಕರು ವಿನಾಕಾರಣ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ ನಮ್ಮ ಸಿಬ್ಬಂದಿಯೊಂದಿಗೆ ವೃತ್ತದಲ್ಲಿ ಠೀಕಾಣಿ ಹೂಡಿ ಸವಾರರು ರಸ್ತೆಗಿಳಿಯದಂತೆ ತಡೆಯಬಹುದು. ಎನ್ನುತ್ತಾರೆ ಡಿವೈಎಸ್‍ಪಿ ಶಾಂತವೀರ ಹಾಗೂ ಪಿಎಸ್‍ಐ ಹೆರಕಲ್.

Related