‘ಬಾರ್ ಲೋಟಾ’ ಕಿರುಚಿತ್ರಕ್ಕೆ ಚಾಲನೆ

‘ಬಾರ್ ಲೋಟಾ’ ಕಿರುಚಿತ್ರಕ್ಕೆ ಚಾಲನೆ

ಮುದ್ದೇಬಿಹಾಳ : ನಮ್ಮ ತಾಲೂಕು ಕಲೆ,ಕಲಾವಿದರ ತವರೂರಾಗಿ ಬೆಳೆಯುತ್ತಿದೆ. ಹೊಸ ಹೊಸ ಪ್ರತಿಭಾವಂತ ಕಲಾವಿದರನ್ನು ಹುಟ್ಟು ಹಾಕುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಹೇಳಿದರು.

ಪಟ್ಟಣದ ಏಪಿಎಂಸಿ ಹನುಮಾನ ದೇವಸ್ಥಾನದಲ್ಲಿ ಶುಕ್ರವಾರ ‘ಬಾರ್ ಲೋಟಾ’ ಕಿರುಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಕವಡಿಮಟ್ಟಿ ಗ್ರಾಮದ ಯುವಕ ಮುತ್ತುರಾಜ್ ನಿರ್ದೇಶನದ “ಬಾರ್ ಲೋಟಾ” ಕಿರು ಚಿತ್ರದ ಚಿತ್ರೀಕರಣ ಪಟ್ಟಣದ ಡಾಬಾವೊಂದರಲ್ಲಿ ನಡೆಯಲಿದೆ.

ತಾಲೂಕ ಕುರುಬರ ಸಂಘದ ಅದ್ಯಕ್ಷ ಎಂ.ಎನ್,ಮದರಿಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮನರಂಜನೆ ಅತಿ ಅವಶ್ಯಕತೆ ಇದೆ ಮನಸ್ಸಿನ ನೋವು ಕಡಿಮೆಯಾಗಲು ಹಾಸ್ಯ ಬಹಾಳ ಪ್ರಮುಖ ಪಾತ್ರವಹಿಸಿದೆ ಇಂತಹ ಹಾಸ್ಯವನ್ನು ಈ ಕಿರುಚಿತ್ರ ನೀಡಲಿ ಎಂದು ಹೇಳಿದರು.

ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ,ಕಿರುತೆರೆಯ ಹಾಸ್ಯ ಕಲಾವಿದ ಗೋಪಾಲ ಹೂಗಾರ,ಮುಖಂಡ ಬಸವರಾಜ ಬಿರಾದಾರ,ಕಿರುಚಿತ್ರದ ನಿರ್ದೇಶಕ ನಾಗರಾಜ ಬಿರಾದಾರ,ಮುನೀರಅಹ್ಮದ ಅವಟಿಗೇರಿ,ಗಣೇಶ ಝಿಂಗಾಡೆ ಇತರರು ಇದ್ದರು.

Related