ಪದಕ ಗೆದ್ದ ಬಜರಂಗ್

  • In Sports
  • August 7, 2021
  • 358 Views
ಪದಕ ಗೆದ್ದ ಬಜರಂಗ್

ಟೋಕಿಯೊ: ಭಾರತದ ಕುಸ್ತಿಪಟು ಬಜರಂಗ್ ಪುನಿಯಾ ಅವರು ಫ್ರೀಸ್ಟೈಲ್ 65 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ಶನಿವಾರ ನಡೆದ ಪಂದ್ಯದಲ್ಲಿ ಕಜಕಿಸ್ಥಾನದ ನಿಯಾಜ್ ಬೆಕೊವ್ ವಿರುದ್ಧ ಜಯಶಾಲಿಯಾದರು. ಈ ಮೂಲಕ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಇಂದು ನಡೆದ ಪಂದ್ಯದಲ್ಲಿ ಬಜರಂಗ್ ಪೂನಿಯಾ ಅವರು ಕಜಕಿಸ್ಥಾನದ ನಿಯಾಜ್ ಬೆಕೊವ್ ವಿರುದ್ಧ 8-0 ಅಂಕಗಳಿಂದ ಗೆದ್ದುಕೊಂಡರು. ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ ಐದನೇ ಕುಸ್ತಿಪಟು ಎಂಬ ಹಿರಿಮೆಗೆ ಭಜರಂಗ್ ಪೂನಿಯಾ ಪಾತ್ರರಾಗಿದ್ದಾರೆ. 2012ರ ಬಳಿಕ ಮೊದಲ ಬಾರಿ ಭಾರತ ಒಂದು ಒಲಿಂಪಿಕ್ಸ್ ನಲ್ಲಿ ಎರಡು ಕುಸ್ತಿಪದಕ ಗೆದ್ದಂತಾಗಿದೆ.
ಈ ಕಂಚಿನ ಪದಕದೊಂದಿಗೆ ಭಾರತದ ಪದಕಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಇದುವರೆಗೆ ನಾಲ್ಕು ಕಂಚು ಮತ್ತು ಎರಡು ಬೆಳ್ಳಿ ಪದಕಗಳನ್ನು ಭಾರತ ಗೆದ್ದುಕೊಂಡಿದೆ.

Related