ಎಸಿಬಿ ಅಧಿಕಾರಿಗಳಿಂದ ದಾಳಿ

ಎಸಿಬಿ ಅಧಿಕಾರಿಗಳಿಂದ ದಾಳಿ

ಗದಗ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಟ್ಯಾಕ್ಸಿ ಪಡೆಯಲು ಆಯ್ಕೆಯಾದ ಯುವಕನಿಂದ 40,000 ರೂ. ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದಾರೆ.

ಅಧಿಕಾರಿ ಜಾಕೀರ ಹುಸೆನ್ ಕುಕನೂರ, ಜಿಲ್ಲಾ ವ್ಯವಸ್ಥಾಪಕ ಜಾಕೀರ ಹುಸೇನ ಹಾಗೂ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಂಪ್ಯೂಟರ್ ಆಪರೇಟರ್ ಅಕ್ಬರ್ ಬಂಧಿತರು.

ಪಿರ್ಯಾದಿ ಫಾರುಖ್ ಅಹ್ಮದ್ ತಂದೆ ಖಾನಸಾಬ್ ಬಿದರಕುಂದಿ, 36 ವರ್ಷ ಉದ್ಯೋಗ ವ್ಯಾಪಾರ ಹಾಗೂ ವಾಹನ ಚಾಲಕ ವಾಸ ಸರಸ್ವತಿ ನಗರ ನರಗುಂದ ಈ ಕುರಿತು ಗದಗ ಎಸಿಬಿ ಠಾಣೆಯಲ್ಲಿ ಗುನ್ನಾ ಕಲಂ-7 (ಎ) ಪಿ.ಸಿ ಆಕ್ಟ್ರ 1988 ರಡಿಯಲ್ಲಿ ಪ್ರಕರಣ ದಾಖಲಾಗಿದೆ.

2018-19 ನೇ ಸಾಲಿನಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ಸಬ್ಸಿಡಿ ಪಡೆದು, ಟ್ಯಾಕ್ಸಿ ಖರೀದಿಸುವ ಸಲುವಾಗಿ ಆನ್ ಲೈನ್ ಮೂಲಕ ಫಾರುಖ ಅಹ್ಮದ ಅರ್ಜಿ ನೀಡಿದ್ದು, ಜಿಲ್ಲಾಧಿಕಾರಿಗಳು ಇವರ ಹೆಸರನ್ನು ಆಯ್ಕೆ ಮಾಡಿದ್ದು ಇರುತ್ತದೆ. ಈಗ ಕೆಎಂಡಿಸಿ ಕಚೇರಿಯಲ್ಲಿ 3 ಲಕ್ಷ ಸಬ್ಸಿಡಿ ಹಣ ಮಂಜೂರಾಗಿದ್ದು.

ಈ ಹಣವನ್ನು ಪಡೆಯಲು ಫಾರುಖಅಹ್ಮದ ಹಲವು ಬಾರಿ ಸದರಿ ಕಾರ್ಯಾಲಯಕ್ಕೆ ಭೇಟಿ ನೀಡಿ ಅಲ್ಲಿನ ಅಧಿಕಾರಿ ಜಾಕೀರಹುಸೆನ್ ಕುಕನೂರ, ಜಿಲ್ಲಾ ವ್ಯವಸ್ಥಾಪಕ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ರವರು ಕಛೇರಿಯ ಕಂಪ್ಯೂಟರ್ ಆಪರೇಟರ್ ಅಕ್ಬರ ಮುಖಾಂತರ 40,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಜಾಕೀರ ಹುಸೆನ್ ಕುಕನೂರ ಇವರು 40,000 ರೂ. ಲಂಚದ ಹಣವನ್ನು ಪಿರ್ಯಾದಿಯಾದ ಫಾರುಖಅಹ್ಮದ ಇವರಿಂದ ಕಂಪ್ಯೂಟರ್ ಆಪರೇಟರ್ ಅಕ್ಬರ್ ಮುಖಾಂತರ ಪಡೆಯುವಾಗ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ, ಆರೋಪಿತರಿಂದ 40,000 ರೂ. ಲಂಚದ ಹಣವನ್ನು ಜಪ್ತಿ ಮಾಡಿಕೊಂಡು ಆರೋಪಿತರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರಪಡಿಸಿರುತ್ತಾರೆ.

Related