ಪಂಚಮಸಾಲಿಯಿಂದ ಸಿಎಂಗೆ ಮನವಿ

ಪಂಚಮಸಾಲಿಯಿಂದ ಸಿಎಂಗೆ ಮನವಿ

ಇಂಡಿ : ಸಿಂದಗಿ ಪಟ್ಟಣದ ಹೊರಭಾಗದಲ್ಲಿ ಇತ್ತೀಚಿಗೆ ಸ್ಥಾಪಿಸಿದ್ದ ವೃತ್ತವನ್ನು ತಾಲೂಕಾಡಳಿತ ತೆರವುಗೊಳಿಸಿದ್ದನ್ನು ಖಂಡಿಸಿ ಚನ್ನಮ್ಮ ಬಳಗ ಮತ್ತು ವೀರರಾಣಿ ಕಿತ್ತೂರ ಚನ್ನಮ್ಮ ಸಹಕಾರ ಸಂಘದ ನೇತೃತ್ವದಲ್ಲಿ ಪಂಚಮಸಾಲಿ ಸಮಾಜ ಬಾಂಧವರು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಪಂಚಮಸಾಲಿ ಸಮಾಜದ ಯುವ ಘಟಕದ ಜಿಲ್ಲಾ ಅಧ್ಯಕ್ಷ ಸೋಮಶೇಖರ ದೇವರ ನಗರ, ಘಟಕದ ಅಧ್ಯಕ್ಷ ಶರಣಗೌಡ ಬಂಡಿ, ಪ್ರಭುಗೌಡ ಪಾಟೀಲ, ಪುರಸಭೆ ಸದಸ್ಯ ಮಾತನಾಡಿ, ದೇಶದ ಪ್ರಥಮ ಸ್ವಾತಂತ್ರ‍್ಯಹೋರಾಟಗಾರ್ತಿ ವೀರರಾಣಿ ಕಿತ್ತೂರ ಚನ್ನಮ್ಮನವರ ವೃತ್ತ ತೆರವುಗೊಳಿಸಿದ್ದು, ಖಂಡನೀಯ. ತಾಲೂಕಾಡಳಿತ ವೃತ್ತ ತೆರವು ಮಾಡಿದ್ದು, ಇಡೀ ದೇಶದ ನಾಗರಿಕರಿಗೆ ಅಪಮಾನ ಮಾಡಿದಂತಾಗಿದೆ. ಕೂಡಲೇ ತಾಲೂಕಾಡಳಿತ ಮತ್ತೆ ಅದೇ ಸ್ಥಳದಲ್ಲಿ ವೃತ್ತ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.

ಮಾಜಿ ಶಾಸಕ ಭೂಸನೂರ ಹಾಗೂ ಹಾಲಿ ಶಾಸಕ ಮನಗೂಳಿ ಅವರ ವೈಯಕ್ತಿಕ ರಾಜಕಾರಣದಲ್ಲಿ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಧೀಮಂತ ಮಹಿಳೆ ರಾಣಿ ಚನ್ನಮ್ಮನವರಿಗೆ ಅಪಮಾನ ವೃತ್ತದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಕೂಡಲೇ ಆದ ತಪ್ಪನ್ನು ಸರಿಪಡಿಸಿ ವೃತ್ತವನ್ನು ಪುನರ್ ನಿರ್ಮಾಣ ಮಾಡಬೇಕು. ದೇಶದ ನಾಗರಿಕರಿಗೆ ತಲೆ ತಗ್ಗಿಸುವ ಕಾರ್ಯ ಮಾಡಿದ ತಾಲೂಕಾಡಳಿತದ ವಿರುಧ್ಧ ಸೂಕ್ತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Related