ಭೂಸ್ವಾಧೀನ ಕಾಯ್ದೆ ವಿರೋಧಿಸಿ ಮನವಿ

ಭೂಸ್ವಾಧೀನ ಕಾಯ್ದೆ ವಿರೋಧಿಸಿ ಮನವಿ

ಪಾವಗಡ : ಭೂ ಸ್ವಾಧೀನ ಕಾಯ್ದೆಯ ತಿದ್ದುಪಡಿ ವಿರೋಧಿಸಿ ಕರ್ನಾಟಕದ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷರಾದ ಪೂಜಾರಪ್ಪ ಶಾಸಕ ವೆಂಕಟರವಣಪ್ಪ ಅವರಿಗೆ ವಿಧಾನಸೌಧದಲ್ಲಿ ಧ್ವನಿ ಗುಡಿಸಿ ಮಾತನಾಡಿ ಎಂದು ಮನವಿ ಪತ್ರ ಸಲ್ಲಿಸಿದರು.

ನಂತರ ಮಾತನಾಡಿ ಭೂಸ್ವಾಧೀನ ಕಾಯ್ದೆಯನ್ನು ಜಾರಿ ಮಾಡಿರುವುದು ರೈತರಿಗೆ ತುಂಬ ನಷ್ಟವಾಗಿದೆ. ರೈತರು ವ್ಯವಸಾಯ ಮಾಡಿ ಬೆಳೆ ಬೆಳೆದು ಜೀವನ ಸಾಗಿಸಲಾಗುತ್ತಿದೆ. ಆದರೆ ಸರಕಾರ ಏಕಾಏಕಿ ರೈತರ ಭೂ ಒಡೆತನವನ್ನೆ ಕಸಿದುಕೊಳ್ಳಲು ಹುನ್ನಾರ ನಡೆಸಲಾಗತ್ತಿದೆ.

ಭೂಸ್ವಾಧೀನ ಕಾಯ್ದೆ ತಿದ್ದುಪಡಿಯನ್ನು ರದ್ದು ಮಾಡಬೇಕು, ಇಲ್ಲದಿದ್ದರೆ ರೈತರು ಮತ್ತು ಸಾರ್ವಜನಿಕರು ವಿಧಾನಸೌಧದ ಒಳಗೆ ಹೋಗಿ ಮುಖ್ಯ ಮಂತ್ರಿಯನ್ನು ಹೊರ ದಬ್ಬಲಾಗುವುದು ಎಂದು ಎಚ್ಚರಿಕೆ ನೀಡಿದರು.

Related