ತಮಿಳುನಾಡಿನಲ್ಲಿ ಮತ್ತೊಬ್ಬ ಶಂಕಿತ ಉಗ್ರನ ಬಂಧನ..!

  • In Crime
  • July 26, 2022
  • 260 Views
ತಮಿಳುನಾಡಿನಲ್ಲಿ ಮತ್ತೊಬ್ಬ ಶಂಕಿತ ಉಗ್ರನ ಬಂಧನ..!

ಬೆಂಗಳೂರು, ಜುಲೈ 26 : ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದ ಶಂಕಿತ ಉಗ್ರ ಅಕ್ತರ್ ಹುಸೇನ್ ಸಂಪರ್ಕದಲ್ಲಿದ್ದ ಜುಬಾ ಎಂಬ ಇನ್ನೊಬ್ಬ ಶಂಕಿತ ಉಗ್ರನನ್ನು ಸಿಸಿಬಿ ಅಧಿಕಾರಿಗಳ ತಂಡ ತಮಿಳುನಾಡಿನಲ್ಲಿ ಸೋಮವಾರ ಬಂಧಿಸಿದೆ.

ಬಂಧಿತ ಉಗ್ರ ಜುಬಾ ಆಲ್‌ಖೈದಾ ಸಂಘಟನೆ ಜತೆಗೆ ನಂಟು ಹೊಂದಿದ್ದ ಎಂದು ಶಂಕಿಸಲಾಗಿದೆ. ಈತ ಬೆಂಗಳೂರಿನಲ್ಲಿ ಸೆರೆ ಸಿಕ್ಕ ಅಕ್ತರ್ ಹುಸೇನ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ. ತಿಲಕ್ ನಗರದ ಪೊಲೀಸರು ಅಕ್ತರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆತನಿಂದ ಪೊಲೀಸರು ಹಲವು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

ತಮಿಳುನಾಡಿನಲ್ಲಿ ಸಿಸಿಬಿಯ ಡಿಸಿಪಿ ಆಗಿರುವ ಡಾ. ಎಸ್‌. ಡಿ. ಶರಣಪ್ಪ ನೇತೃತ್ವದಲ್ಲಿ ನಾಲ್ಕು ತಂಡಗಳು ಕಾರ್ಯಾಚರಣೆ ನಡೆಸಿವೆ. ಇವರ ಜತೆ ಕೇಂದ್ರ ತನಿಖಾ ತಂಡಗಳು ಸಹ ಕೈಜೋಡಿಸಿದ್ದಾರೆ ಎಂದು ತಿಳಿದು ಬಂದಿದೆ.

Related