ರೈತರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್‌

ರೈತರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್‌

ಕೋಲಾರ : ಆಲೂಗಡ್ಡೆ ಬೆಳೆದವರಿಗೆ ಸುಗ್ಗಿಯೋ ಕಾಲ ಇದಾಗಿದ್ದು, ಖುಷಿ ಹೆಚ್ಚಾಗಿದ್ದು, ೫೦ ಕೆ.ಜಿ ತೂಕದ ಒಂದು ಮೂಟೆ ಆಲೂಗಡ್ಡೆ ಬೆಲೆ ೧೫೦೦ ರು.ಗಳ ಗಡಿ ದಾಟಿದೆ.

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿದವರಿಗೆ ಈಗ ಬೆಲೆ ಏರಿಕೆಯಾಗಿದೆ. ಅಂದ್ಹಾಗೆ, ಜಿಲ್ಲೆಯಲ್ಲಿ ೧೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಮಳೆ ಹೆಚ್ಚಾಗಿ ಬಿದ್ದುದರಿಂದ ಆ ಭಾಗದಲ್ಲಿ ಆಲೂಗಡ್ಡೆ ಬೆಳೆ ಸಂಪೂರ್ಣ ನಾಶವಾಗಿದ್ದು, ಇದರಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಗು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಆಲೂಗಡ್ಡೆ ಬೆಳೆದ ರೈತರಿಗೆ ಲಾಟರಿ ಹೊಡೆದಂತಾಗಿದೆ.

ಇನ್ನು ಬಿತ್ತನೆ ಬೀಜಕ್ಕೂ ಹೆಚ್ಚು ಬೆಲೆ ಹೆಚ್ಚಿದ್ದು, ೫ ರಿಂದ ೬ ಸಾವಿರ ಬೆಲೆಯಿದ್ದ ೫೦ ಕೆಜಿ ಮೂಟೆ, ಬಿತ್ತನೆ ಬೀಜ ದುಬಾರಿಯಾಗಿದೆ. ಹಾಗಾಗಿ ರೈತರು ಬಿತ್ತನೆ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ.

Related