ಅನುಷ್ಕಾ ವಿರಾಟ್ ಮನೆಗೆ ಮತ್ತೊಬ್ಬರ ಆಗಮನ…!

ಅನುಷ್ಕಾ ವಿರಾಟ್ ಮನೆಗೆ ಮತ್ತೊಬ್ಬರ ಆಗಮನ…!

ಭಾರತದ ಕ್ರಿಕೆಟ್ ಟೀಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಅವರು ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ಈಗ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ವಿಷಯವೆಂದು ಹೊರಬಿತ್ತಿದೆ.

ಹೌದು, ವಿರಾಟ್ ಮತ್ತು ಅನುಷ್ಕಾ ಅವರಿಗೆ ಎರಡನೇ ಮಗುವಾಗಿದ್ದು ಇದರ ಬಗ್ಗೆ ಕುದ್ದು ವಿರಾಟ್ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಅನುಷ್ಕಾ ಎರಡನೇ ಬಾರಿ ಗರ್ಭಧರಿಸಿದ್ದಾರೆ ಎಂಬ ವಿಷ್ಯ ಅಭಿಮಾನಿಗಳಿಗಿರಲಿ ಮಾಧ್ಯಮಗಳಿಗೂ ತಿಳಿದಿರಲಿಲ್ಲ. ಇದೇ ಫೆ. 20 ವಿರುಷ್ಕಾ, ಅಭಿಮಾನಿಗಳಿಗೆ ಅಚ್ಚರಿಯ ಸುದ್ದಿ ನೀಡಿದ್ದಾರೆ. ಫೆ. 15, 2024ರಂದು ಎರಡನೇ ಮಗುವಿಗೆ ಅನುಷ್ಕಾ ಜನ್ಮ ನೀಡಿರುವುದಾಗಿ ತಿಳಿಸಿದ್ದಾರೆ. ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದು ಅಕಾಯ್ ಎಂದು ಹೆಸರಿಡಲಾಗಿದೆ. ಮೊದಲ ಮಗಳು ಜನವರಿ 2021 ರಲ್ಲಿ ಜನಿಸಿದ್ದು ಅವಳಿಗೆ ವಾಮಿಕಾ ಎಂದು ಹೆಸರಿಟ್ಟಿದ್ದರು.

 

Related