ಪಿಎಂ ಉಜ್ವಲ ಯೋಜನೆ: 4.85 ಕೋಟಿ ಬಿಡುಗಡೆ ಮಾಡಿದ ಸಂಸದ ಅನಂತಕುಮಾರ್

ಪಿಎಂ ಉಜ್ವಲ ಯೋಜನೆ: 4.85 ಕೋಟಿ ಬಿಡುಗಡೆ ಮಾಡಿದ ಸಂಸದ ಅನಂತಕುಮಾರ್

ಕಾರವಾರ: ಪ್ರಧಾನಮಂತ್ರಿ ಉಜ್ವಲ್ ಗ್ಯಾಸ್ ಯೋಜನೆಯಡಿ ಉತ್ತರಕನ್ನಡ ಜಿಲ್ಲೆಗೆ ಕೇಂದ್ರದಿಂದ 4,85,82,105 ರೂ. ಬಿಡುಗಡೆಯಾಗಿದೆ ಸಂಸದ ಅನಂತಕುಮಾರ್ ಹೆಗಡೆ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಉಜ್ವಲ್ ಯೋಜನೆಗೆ ಜಿಲ್ಲೆಯಲ್ಲಿ 62, 205 ಫಲಾನುಭವಿಗಳಿದ್ದಾರೆ. ಪ್ರತಿ ಫಲಾನುಭವಿಗಳಿಗೂ 781 ರೂ. ಏಪ್ರಿಲ್ ತಿಂಗಳ ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗಿದೆ ಎಂದು ಹೇಳಿದ್ದಾರೆ.

ಏಪ್ರಿಲ್ 30ರೊಳಗಾಗಿ ಅಡುಗೆ ಅನಿಲ ತೆಗೆದುಕೊಳ್ಳದಿದ್ದರೆ ಮುಂದಿನ ತಿಂಗಳ ಹಣ ಖಾತೆಗೆ ಜಮೆ ಆಗುವುದಿಲ್ಲ. ಆದ್ದರಿಂದ ದಯವಿಟ್ಟು ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆದವರು ಏಪ್ರಿಲ್ 30ರೊಳಗಾಗಿ ಅಡುಗೆ ಅನಿಲವನ್ನು ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಸಂಸದ ಹೆಗಡೆ ಪ್ರಕಟಣೆಯಲ್ಲಿ ಕೋರಿದ್ದಾರೆ.

 

Related