ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

  • In State
  • July 15, 2020
  • 708 Views
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ಹಾನಗಲ್:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾನಗಲ್ ತಾಲೂಕು ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಿದ್ದುಪಡಿ ಮಾಡಿರುವ ಎ.ಪಿ.ಎಂ.ಸಿ. ಮತ್ತು ಭೂ ಕಾಯಿದೆಗಳು ರೈತವಿರೋಧಿ ಕಾಯಿದೆಗಳಾಗಿರುತ್ತದೆ ಮತ್ತು ಬೆಳೆವಿಮೆಯಲ್ಲಿ ನ್ಯೂನ್ಯತೆಗಳನ್ನು ಸರಿಪಡಿಸಲು ಮತ್ತು ಬಾಕಿ ಇರುವ ಬೆಳೆಹಾನಿ ಪರಿಹಾರ ಮೊತ್ತ ಜಮಾ ಮಾಡದೆ ಇರುವುದು ಈ ಎಲ್ಲಾ ಸಮಸ್ಯೆಗಳ ಕುರಿತು ೨೧-೦೭-೨೦೨೦ ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಕೇಂದ್ರ ಮತ್ತು ರಾಜ್ಯಸರ್ಕಾರಗಳು ಮಾಡಿರುವ ಎ.ಪಿ.ಎಂ.ಸಿ. ಮತ್ತು ಭೂ ತಿದ್ದುಪಡಿ ಕಾಯ್ದೆಗಳು ಕಾರ್ಪೋರೇಟ್ ಹಾಗೂ ಬಂಡವಾಳಶಾಹಿಗಳ ಪರವಾಗಿದೆ. ಈ ಕೂಡಲೇ ಈ ಕಾಯ್ದೆಗಳನ್ನು ಕೈಬಿಡಬೇಕು ಇಲ್ಲವಾದಲ್ಲಿ ಉಗ್ರಹೋರಾಟ ಮಾಡಲಾಗುವುದೆಂದು ತಾಲೂಕು ರೈತ ಸಂಘ ತಿಳಿಸಿದೆ. ತೋಟಗಾರಿಕೆ ಬೆಳೆ ಮಾರಾಟವಾಗದೆ ಇರುವಂತಹ ರೈತರಿಗೆ ಪರಿಹಾರ ಒದಗಿಸಬೇಕು. ಬೇಸಿಗೆ ಹಂಗಾಮಿನಲ್ಲಿ ಬೆಳೆ ಸರ್ವೇ ಆಗಿರುವುದಿಲ್ಲ ಕಾರಣ ತೋಟಗಾರಿಕೆ ಬೆಳೆ ಇದ್ದು ಸಹ ರೈತರು ಪರಿಹಾರ ವಂಚಿತರಾಗಿದ್ದಾರೆ. ರೈತರಿಗೂ ತಕ್ಷಣವೇ ಪರಿಹಾರ ವ್ಯವಸ್ಥೆಯಾಗಬೇಕೆಂದರು.
೨೦೧೯-೨೦ನೇ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ವಿತರಿಸುವಲ್ಲಿ ರಾಜ್ಯ ಸರ್ಕಾರ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಗಳಿಂದ ಪರಿಹಾರ ವಿತರಿಸುವ ಗೊಂದಲವನ್ನು ತಕ್ಷಣವೇ ಸರಿಪಡಿಸಿ ಯಾವ ಇಲಾಖೆಯಿಂದ ಪರಿಹಾರ ನೀಡಬೇಕು ಎಂಬ ಬಗ್ಗೆ ಕೂಡಲೇ ಸ್ಪಷ್ಟಪಡಿಸಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಜಿಲ್ಲಾಧಿಕಾರಿಗಳು ಪರಿಹಾರ ವಿತರಿಸಬೇಕೆಂಬ ಹಲವಾರು ಬೇಡಿಕೆಗಳ ಈಡೇರಿಕೆಗೆ ತಾಲೂಕ ರೈತಸಂಘದ ಅಧ್ಯಕ್ಷ ಮರಿಗೌಡ ಪಾಟೀಲ್, ಹಾವೇರಿ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಮಹೇಶ್ ವಿರಪ್ಪಣ್ಣನವರ್, ರಾಮಪ್ಪ ಕೋಟಿ, ಸೋಮಣ್ಣ ಜಡೆ ಗೊಂಡರ, ಮುಂತಾದರೈತ ಮುಖಂಡರು ಉಪಸ್ಥಿತರಿದ್ದರು.

Related