ನಕಲಿ ದಾಖಲೆಗಳನ್ನು ಸೃಷ್ಟಿಸಿ ಶಿಕ್ಷಣ ಸಂಸ್ಥೆಯನ್ನು ಕಬಳಿಸಲು ಯತ್ನ

ನಕಲಿ ದಾಖಲೆಗಳನ್ನು ಸೃಷ್ಟಿಸಿ ಶಿಕ್ಷಣ ಸಂಸ್ಥೆಯನ್ನು ಕಬಳಿಸಲು ಯತ್ನ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂಚಿಂಚು ಜಾಗಕ್ಕೂ ಚಿನ್ನದ ಬೆಲೆ ಬಂದಿರುವುದರಿಂದ ಅಕ್ರಮಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ.  ಅದರಂತೆ ಬೆಂಗಳೂರು ನಗರದ ಕೆಆರ್ ಪುರಂ ಹೋಬಳಿ ವ್ಯಾಪ್ತಿಯ ಥಣಿಸಂದ್ರ ಮುಸ್ಲೀಂ ಕಾಲೇಜು ನಲ್ಲಿ ಮುಂಬೈ ಮೂಲದ ವ್ಯಕ್ತಿ ನಕಲಿ ಟ್ರಸ್ಟ್ ಹೆಸರಿನಲ್ಲಿ ದಾಖಲೆಗಳನ್ನು ಸೃಷ್ಟಿಸಿ ಕೋಟಿಗಟ್ಟಲೆ ಬೆಲೆ ಬಾಳುವ ಆಸ್ತಿ ಕಬಳಿಕೆಗೆ ಹುನ್ನಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರ್ತಿದೆ.

ಹೌದು, ಶಿಕ್ಷಣ ಸಂಸ್ಥೆಗೆ ದಾನ ನೀಡಿದ್ದ ಜಾಗಕ್ಕೆ ಅಕ್ರಮ ದಾಖಲೆ ಸೃಷ್ಟಿಸಿ ಮುಂಬೈ ಮೂಲದ ವ್ಯಕ್ತಿ ವಂಚಿಸಿರುವ ಪ್ರಕರಣ ಖಂಡಿಸಿ ನೂರಾರು ಮಹಿಳಾ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.

ಮುಂಬೈನ ಅಲ್ ಜಾಮಿಯ ಮೊಹಮ್ಮದೀಯ ಎಜುಕೇಷನ್ ಸೊಸೈಟಿ (ನೊಂದಾಯಿತವಲ್ಲದ ಸೊಸೈಟಿ) ಹೆಸರಿಗೆ ವರ್ಗಾವಣೆ ಮಾಡುವಂತೆ ಪತ್ರ ಸೃಷ್ಟಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಥಣಿಸಂದ್ರ ಗ್ರಾಮದಲ್ಲಿ 5.19 ಎಕರೆ ಭೂಮಿ ಖರೀದಿಸಿದ್ದರು.  ಆದರೆ, ಪರವಾನಗಿ ಪಡೆಯದೆ ಕಟ್ಟಡ ಕಟ್ಟಿದ್ದ ಕಾರಣಕ್ಕೆ 1991ರಲ್ಲಿ ಜಿಲ್ಲಾಧಿಕಾರಿ ದಂಡ ವಿಧಿಸಿ, ಕಂದಾಯ ವಸೂಲಿಗೆ ಆದೇಶಿಸಿದ್ದರು ಎಂದು ಇದೇ ವೇಳೆ ದಾಖಲೆ ಪ್ರದರ್ಶಿಸಿ ಆರೋಪ ವ್ಯಕ್ತಪಡಿಸಿದರು.

5.19 ಎಕರೆ ಪೈಕಿ 2 ಎಕರೆ ಜಮೀನನ್ನು ಶೈಕ್ಷಣಿ ಉದ್ದೇಶಕ್ಕೆ ಮೀಸಲಿಡಬಹುದು ಎಂದು ಸೂಚಿಸಿದ್ದರು. ಹೀಗಾಗಿ, 1994ರಲ್ಲಿ ಮೊಹಮ್ಮದೀಯ ಎಜುಕೇಷಲ್ ಟ್ರಸ್ಟ್ ಎಂಬ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದ ಅಜೀಜುದ್ದಿನ್, ಸಂಸ್ಥೆಗೆ 10,800 ಚದರ ಅಡಿ ಜಾಗ ಮೀಸಲಿಟ್ಟಿದ್ದರು.

ಆಡಳಿತ ನಿರ್ವಹಣೆ ಜವಾಬ್ದಾರಿಯನ್ನು ಜನಾಬ್ ಮೌಲಾನ ಪಿ. ರಫ್ ಅಹಮದ್ ಒಮೇರಿ ಸಾಹೇಬ್, ಜನಾಬ್ ಅಬ್ದುಲ್ ರಾಖಿಬ್, ಜನಾಬ್ ಆರ್.ಎ. ಜಲೀಲ್ ಸಾಹೇಬ್ ಗೆ ವಹಿಸಿದ್ದರು. 1999ರ ಫೆ.18ರಂದು ಓರಲ್ ಹಿಬ್ಬ ಎಂಬ (ಮುಸ್ಲಿಂ ಸಾಂಪ್ರದಾಯಿಕ ಉಡುಗೊರೆ) ಛಾಪಾ ಕಾಗದ ಸೃಷ್ಟಿಸಿ, ಟ್ರಸ್ಟ್ ಗೆ ನೀಡಿದ್ದ 10,800 ಚದರ ಅಡಿ ಜಾಗದ ಜತೆಗೆ ಉಳಿದೆಲ್ಲ ಜಾಗವನ್ನು 2022ರಲ್ಲಿ ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಬೆಂಗಳೂರು ಹೆಸರಿನಲ್ಲಿ ಸಿಟಿ ಸಿವಿಲ್ ಕೋರ್ಟ್‌ ನಲ್ಲಿ ದಾವೆ ಹೂಡಿ, ಪಾಲುದಾರಿಕೆ ಪ್ರಶ್ನಿಸಿದ್ದರು. ಇದನ್ನೂ ಓದಿ: ಪಾಕ್ ವಿರುದ್ಧ ಟೀಮ್ ಇಂಡಿಯಾಗೆ ಭರ್ಜರಿ ಜಯ

ವಿಚಾರಣೆ ನಡೆಸಿದ ನ್ಯಾಯಾಲಯ, ಅಲ್ ಜಾಮಿಯ ಮೊಹಮ್ಮದೀಯ ಎಜುಕೇಷನ್ ಸೊಸೈಟಿ ಮುಂಬೈ, ನೋಂದಾಯಿತ ಶಿಕ್ಷಣ ಸಂಸ್ಥೆಯಲ್ಲ ಮತ್ತು ಅರ್ಜಿದಾರರು ಸಂಸ್ಥಾಪಕರ ಕುಟುಂಬದ ವ್ಯಕ್ತಿಯಲ್ಲ ಎಂಬ ವಿಷಯ ಗಮನಿಸಿ ಅರ್ಜಿ ವಜಾಗೊಳಿಸಿತ್ತು ಎಂದು ಇದೇ ವೇಳೆ ತಿಳಿಸಿದರು.

ಇದನ್ನ ಪ್ರಶ್ನಿಸಿ ಜಾಮಿಯ ಮೊಹಮ್ಮದಿಯ ಎಜುಕೇಷನ್ (ನಕಲಿ ಸೊಸೈಟಿ ) ಯವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್. ನಟರಾಜ್ ಅವರ ಏಕಸದಸ್ಯ ಪೀಠ, ವಿಚಾರಣಾ ನ್ಯಾಯಾಲಯದ ಆದೇಶ ಎತ್ತಿಹಿಡಿದಿತ್ತು ಎಂದು ಹೇಳಿದ ಅವರು ಜತೆಗೆ, ನ್ಯಾಯಾಲಯವನ್ನು ದಾರಿ ತಪ್ಪಿಸಿದ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ 5 ಲಕ್ಷ ರೂ. ದಂಡ ವಿಧಿಸಿತ್ತು ಎಂದರು.

ಈ ಸಂದರ್ಭದಲ್ಲಿ ಜಾಗದ ಮಾಲೀಕ ಮಸೀ ಅಹಮದ್, ಅಫೀಜ್ ಅಬ್ದುಲ್ಲ, ಅಮೀದ್ , ಅಕ್ರಪಾಷ, ಅಬ್ದುಲ್ ಅಮೀದ್ ಪಾಷ, ಸಯದ್ ಸಮೀಉಲ್ಲ, ಚಾಂದ್ ಪಾಷ, ನಯಾಜ್ ಅಹಮದ್ ಸೇರಿದಂತೆ ನೂರಾರು ಕನ್ನಡಪರ ಸಂಘಟನೆಯ ಮಹಿಳೆಯರು ಇದ್ದರು.

Related