ಅಲ್ಲು ಅರ್ಜುನ್ ಲುಕ್ ನೋಡಿ ಫ್ಯಾನ್ಸ್ ಫಿದಾ

ಅಲ್ಲು ಅರ್ಜುನ್ ಲುಕ್ ನೋಡಿ ಫ್ಯಾನ್ಸ್ ಫಿದಾ

ತೆಲುಗು ಚಿತ್ರರಂಗದಲ್ಲಿ ಅಲ್ಲು ಅರ್ಜುನ್ ತಮ್ಮತೆಯಾದ ಅಭಿಮಾನಿಗಳ ಬಳಗವನ್ನು ಹೊಂದಿದ್ದು, ಪುಷ್ಪ ಚಿತ್ರದ ಮೂಲಕ ಇನ್ನಷ್ಟು ಹೆಚ್ಚು ಅಭಿಮಾನಿಗಳನ್ನು ಗಳಿಸಿದ್ದರು. ಇದೀಗ ಪುಷ್ಪ 2 ಚಿತ್ರೀಕರಣವಾಗುತ್ತಿದ್ದು, ಇಂದು ಇದರ ಟೀಸರ್ ರಿಲೀಸ್ ಆಗಿದೆ. ಅಲ್ಲು ಅರ್ಜುನ್ ಅಭಿಮಾನಿಗಳು ಸಿಳ್ಳೆ ಹೊಡೆದು ಸಿನಿಮಾ ನೋಡಲು ಕಾಯುತ್ತಿದ್ದಾರೆ.

ಹೌದು, ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್ ವಿಭಿನ್ನ ಪಾತ್ರದಲ್ಲಿ ಮಿಂಚಲಿದ್ದು ಸೀರೆಯುಟ್ಟು ಕತ್ತಲ್ಲಿ ಹೂವಿನ ಹಾರ ಹಾಕಿ ಹೊಡೆದಾಡುತ್ತಿರುವ ದೃಶ್ಯ ಬಲೂ ರೋಚಕವಾಗಿದೆ. ಇನ್ನು ಈ ಟೀಸರ್ ನೋಡಿದ ಅಲ್ಲು ಅಭಿಮಾನಿಗಳ ಮನದಲ್ಲಿ ಇನ್ನಷ್ಟು ಕುತೂಹಲವನ್ನು ಕೆರಳಿಸಿದೆ.

ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿರುವ, ಬರೋಬ್ಬರಿ 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದ ಟೀಸರ್‌ನಲ್ಲಿ ಸೀರೆ ಉಟ್ಟು ನಿಂತ ಅಲ್ಲು ಲುಕ್ ನೋಡಿ ಭಯಂಕರ  ಅಂತಿದಾರೆ ಫ್ಯಾನ್ಸ್.

 

Related