ಸಮಾವೇಶಕ್ಕೆ ಕೋಟೆನಾಡಿನಲ್ಲಿ ಸಕಲ ಸಿದ್ದತೆ

ಸಮಾವೇಶಕ್ಕೆ ಕೋಟೆನಾಡಿನಲ್ಲಿ ಸಕಲ ಸಿದ್ದತೆ

ಗಜೇಂದ್ರಗಡ :  ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ವಿಭಾಗಮಟ್ಟದ ಸಮಾವೇಶ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 190ನೇ ಹುತಾತ್ಮ ದಿನಾಚರಣೆ ಮತ್ತು ಜನಪದ ಸಂಭ್ರಮ  ಜ.27 ರಂದು ಸಂಜೆ 6ಕ್ಕೆ ಗದಗ  ಜಿಲ್ಲೆಯ  ಗಜೇಂದ್ರಗಡದ  ಎಪಿಎಂಸಿ  ಎದುರು ನಡೆಯಲಿದೆ ಎಂದು ಕರವೇ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಸ್. ಸೋಂಪೂರ ತಿಳಿಸಿದರು.

ಸ್ಥಳೀಯ ರಾಜೂರು ರಸ್ತೆಯಲ್ಲಿರುವ  ಪ್ರವಾಸಿ  ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳಗಾವಿ ವಿಭಾಗದ 7 ಜಿಲ್ಲೆಗಳ ಕರವೇ ಕಾರ್ಯಕರ್ತರು  ಸೇರಿದಂತೆ ಅಂದಾಜು 40 ಸಾವಿರ  ಜನರು ಭಾಗವಹಿಸುವ  ನಿರೀಕ್ಷೆಯಿದೆ. ವಿಜಯ ಮಹಾಂತ ಸ್ವಾಮೀಜಿ, ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮಹಾಲಿಂಗರಾಯ  ಮಹಾರಾಜರು, ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿ, ಗಜೇಂದ್ರಗಡದ ತೆಕ್ಕೆದ ದರ್ಗಾದ ನಿಜಾಮುದ್ದೀನ್ ಷಾ ಆಶ್ರಫಿ ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.

ಕರವೇ  ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅಧ್ಯಕ್ಷತೆ ವಹಿಸಲಿದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮಾರಂಭ ಉದ್ಘಾಟಿಸುವರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್ ಪಾಟೀಲ, ಶಾಸಕ ಎಚ್.ಕೆ.ಪಾಟೀಲ ಸೇರಿದಂತೆ ಇತರರು ಭಾಗವಹಿಸುವರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕರವೇ ಮುಖಂಡ ರಾಜು ಸಾಂಗ್ಲೀಕಾರ, ರಜಾಕ್ ಡಾಲಯತ್, ಅಶೋಕ ಜಿಗಳೂರು, ವಿರೇಶ ಸಂಗಮದ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದರು.

Related