ಕಳಸಾಬಂಡೂರಿ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ

ಕಳಸಾಬಂಡೂರಿ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ

ಸವದತ್ತಿ:ಉತ್ತರ ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ನೀರಾವರಿ ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ನಡೆಯುತ್ತಿರುವಂತಹ ಕರ್ನಾಟಕ ಸರ್ಕಾರ ಶುಕ್ರವಾರ ಕಳಸಾಬಂಡೂರಿ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ಕೊಟ್ಟಿದ್ದಕ್ಕಾಗಿ ಈ ನಾಡಿನ ಜನತೆಯ ಹಾಗೂ ರಾಜ್ಯದ ಕಳಸಾಬಂಡೂರಿ ಹೋರಾಟ ಸಮಿತಿಗಳ ಪರವಾಗಿ  ಅಭಿನಂದಿಸುವೆ ಎಂದು ಉಪಸಭಾದ್ಯಕ್ಷ ಆನಂದ ಮಾಮನಿಯವರು ಹೇಳಿದರು.

ಪಟ್ಟಣದ ಕಾರ್ಯಾಲಯದ ಮುಂಭಾಗದಲ್ಲಿ ಬಿಜೆಪಿಯ ಯುವ ಮೋರ್ಚಾ ಘಟಕದವರು ಆಚರಿಸಿದ ಸಂಭ್ರಮಾಚರಣೆ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಡಿಯುವ ನೀರಿಗಾಗಿ ೧.೭೨.ಟಿಎಮ್‌ಸಿ ನೀರನ್ನು ಮಲಪ್ರಭಾ  ನದಿಗೆ ಕಳಸಾ ನಾಲಾ ತಿರುವು ತಿರುಗಿಸುವ ಯೋಜನೆಗೆ ೮೮೫ ಕೋಟಿ ರೂ. ಮೊತ್ತದ  ಪರಿಷ್ಕರಣಾ ಯೋಜನೆ ಅನುಮೋದನೆಗೆ ಆದೇಶ ಹೊರಡಿಸಿದೆ. ಅದೂ ಕೂಡಾ ಸ್ವಾಗತಾರ್ಹ ಮತ್ತು ಬಂಡೂರಿ ಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ ಕೂಡು ಕಾಲುವೆ ಮುಖಾಂತರ  ಕುಡಿಯುವುದಕ್ಕಾಗಿ ಸುಮಾರು ೨೧೮ ಟಿಎಮ್‌ಸಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸಿ ಬಂಡೂರಿ ನಾಲಾ ಯೋಜನೆ ಬಗ್ಗೆ ಈಗಾಗಲೇ ಸರ್ಕಾರ ೭೯೧.೫೦. ಕೋಟಿ ರೂ. ಪರಿಷ್ಕೃತ ಯೋಜನಾ ವರದಿಗೂ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಇದು ಸರ್ಕಾರದ ದಿಟ್ಟ ನಿರ್ಧಾರ ಎಂದರು.

ಕಳಸಾ ಬಂಡೂರಿ ಕುಡಿಯುವ ನೀರಿಗೆ ವಿಸ್ತçತ ಯೋಜನಾ ವರದಿಗೆ ನಮ್ಮ ಸರ್ಕಾರ ಆಡಳಿತಾತ್ಮಕ ವರದಿಯನ್ನು ನೀಡಿರುವುದಕ್ಕೆ ನಮ್ಮ ಮುಖ್ಯಮಂತ್ರಿಗಳಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿಯವರಿಗೂ ಅಭಿನಂದನೆ ಸಲ್ಲಿಸಿದರು.

 

Related