ಮತ್ತೆ ಸುದ್ದಿಗೆ ಬಂದ ನಟಿ ರಮ್ಯಾ

  • In Cinema
  • November 15, 2021
  • 434 Views
ಮತ್ತೆ ಸುದ್ದಿಗೆ ಬಂದ ನಟಿ ರಮ್ಯಾ

ಬೆಂಗಳೂರು : ನಟಿ ರಮ್ಯಾ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿಂದುತ್ವ ಎನ್ನುವುದು ರಾಜಕೀಯವಾಗಿದೆ ಎಂದು ಸಾಮಾಜಿಕ  ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಮಾಜಿ ಸಂಸದೆ ರಮ್ಯಾ,ಇನ್ಸ್ಟಾಗ್ರಾಮ್ ನಲ್ಲಿ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಹಿಂದೂ ಧರ್ಮ ಹಾಗೂ ಹಿಂದುತ್ವ ಬೇರೆ ಬೇರೆ.

ಹಿಂದೂ ಧರ್ಮ ಎನ್ನುವುದು ರಾಜಕೀಯವಲ್ಲ. ಆದ್ರೆ ಹಿಂದುತ್ವ ಎನ್ನುವುದು ರಾಜಕೀಯ. ಹಿಂದೂ ಧರ್ಮ ಎಂದರೆ ಎಲ್ಲರ ಒಳಗೊಳ್ಳುವಿಕೆ ಹಾಗೂ ಎಲ್ಲರ ಬಗ್ಗೆಯೂ ಇರುವ ಪ್ರೀತಿ. ಇದಕ್ಕೆ ವಿರುದ್ಧವಾಗಿದ್ದು ಹಿಂದುತ್ವ. ನಿಜವಾದ ಹಿಂದೂಗಳಿಗೆ ಈ ವ್ಯತ್ಯಾಸ ತಿಳಿದಿರಲಿದೆ ಎಂದಿದ್ದಾರೆ.

Related