ಓಡಿ ಬಂದು ಮತ ಹಾಕಿದ ಮದುವೆ ಗಂಡು

ಓಡಿ ಬಂದು ಮತ ಹಾಕಿದ ಮದುವೆ ಗಂಡು

ಚಾಮರಾಜನಗರ: ಇಂದು ಕರ್ನಾಟಕ ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಮತದಾನ ನಡೆಯುತ್ತಿದ್ದು, ಚಾಮರಾಜನಗರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ನವ ವಧು ಒಂದು ಮದುವೆ ಮುಹೂರ್ತಕ್ಕು ಮುನ್ನ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಮಾದರಿಯಾಗಿದ್ದಾರೆ.

ಹೌದು, ತಾಳಿ ಕಟ್ಟುವ ಶುಭ ವೇಳೆಗೂ ಮುನ್ನ ವರ ಚೇತನ್ ಮತಗಟ್ಟೆಗೆ ಭೇಟಿ ನೀಡಿ ತಮ್ಮ ಅಮೂಲ್ಯವಾದ ಮತ ನೀಡಿ, ಮತದಾನ ಮಾಡುವುದು ನಮ್ಮ ಮೂಲಭೂತ ಹಕ್ಕು ಎಂದು ಹೇಳಿದ್ದಾರೆ. ಬೆಳಿಗ್ಗೆ 9 ಗಂಟೆಗೆ ತಾಳಿ ಕಟ್ಟುವ ಶುಭ ಮುಹೂರ್ತವಿತ್ತು. ಹೀಗಾಗಿ ಇದಕ್ಕೂ ಮುನ್ನ ಮತಗಟ್ಟೆಗೆ ಓಡೋಡಿ ಬಂದ ವರ ಚೇತನ್ ಮತ ಹಾಕಿದರು.

ಚಲಾಯಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಚೇತನ್, ಮತದಾನ ಮೊದಲು ನಂತರ ಮದುವೆ ಎಂದು ಹೇಳಿದ್ದಾರೆ. ಶುಭ ಮುಹೂರ್ತಕ್ಕೆ ಸಮಯ ಮೀರುವ ಕಾರಣ ವರ ಓಡೋಡಿ ಬಂದು ಮತ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ್ದಾರೆ. ಮತದಾನದ ಹೆಸರೇಳಿಕೊಂಡು ಮನೆಯಲ್ಲಿ ಮತದಾನ ಮಾಡದೇ ಇರುವ ಯುವ ಪೀಳಿಗೆಗೆ ಈ ಘಟನೆ ಮಾದರಿಯಾಗಿದೆ.

 

Related