ಜನರ ಜೀವಕ್ಕೆ ಬೆಲೆ ಕೊಡದ ಸರ್ಕಾರ

ಜನರ ಜೀವಕ್ಕೆ ಬೆಲೆ ಕೊಡದ ಸರ್ಕಾರ

ಆನೇಕಲ್ : ಕೊರೋನಾ ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ನೂರು ದಿನಗಳು ಕಳೆದರು ಸೋಂಕಿತರಿಗೆ ಚಿಕಿತ್ಸೆ ನೀಡಲು ಯಾವುದೇ ಪೂರ್ವಸಿದ್ಧತೆಗಳನ್ನು ಮಾಡಿಕೊಂಡಿಲ್ಲ. ಪಾಸಿಟಿವ್ ಬಂದರು ಚಿಕಿತ್ಸೆ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡುವ ಯೋಗ್ಯತೆ ಸರಕಾರಕ್ಕಿಲ್ಲ, ಜನರ ಜೀವದ ಜೊತೆ ಆಟವಾಡುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ಲೇವಡಿ ತಿಳಿಸಿದರು.

ಸೂರ್ಯನಗರ 4ನೇ ಹಂತದ ಬಡಾವಣೆಯ ರೈತರ ಕುಂದು ಕೊರತೆಗಳ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಮಾಧ್ಯಮಗಳ ಮುಂದೆ ಪ್ರಚಾರಕ್ಕಾಗಿ ಸರ್ಕಾರ ಕೆಲಸ ಮಾಡುತ್ತಿದೆ. ಕೊರೋನಾ ನಿರ್ವಹಣೆ ಶ್ರೀರಾಮುಲುಗೆ ನೀಡಿದ್ದೇವೆ ಅಂತಾರೆ, ಮತ್ತೊಂದು ದಿನ ಅಶೋಕ್ ನೋಡಿಕೊಳ್ಳುತ್ತಾರೆ. ಇನ್ನೊಂದು ದಿನ ಸುಧಾಕರ್ ನೋಡಿಕೊಳ್ಳುತ್ತಾರೆ ಎಂದು ಹೇಳಿಕೆಯನ್ನು ಕೊಡುತ್ತಾರೆ. ನಾನೇ ಉಸ್ತುವಾರಿಯನ್ನು ನೋಡಿಕೊಳ್ಳುತ್ತೇನೆಂದು. ಜನತೆ ಯಾರನ್ನು ಕೇಳಬೇಕು? ಯಾರನ್ನ ಬಿಡಬೇಕು? ಎಂಬುದು ತಿಳಿಯದಾಗಿದೆ.

ವಸತಿ ಸಚಿವ ಸೋಮಣ್ಣ ಮಾತನಾಡಿ ಸೂರ್ಯನಗರ 4ನೇ ಹಂತಕ್ಕೆ ಚಾಲನೆ ನೀಡಿ 9 ವರ್ಷಗಳಾಗಿದೆ. ಆದರೆ ಇದುವರೆಗೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ಮುಖ್ಯಮಂತ್ರಿಗಳಿಗೆ ಒತ್ತಾಯ ಹಾಕಿ ಈ ಭಾಗದ ರೈತರಿಗೆ ಅನುಕೂಲವಾಗುವಂತಹ ಹಾಗೂ ಸೂರಿಲ್ಲದವರಿಗೆ ಸೂರು ಕಲ್ಪಿಸಿ ಕೊಡುವಂತಹ ಸಾವಿರದ ಒಂಬೈನೂರ ಎಕರೆಯ ಬೃಹತ್ ಯೋಜನೆ ಮತ್ತೆ ಪ್ರಾರಂಭಿಸಿದ್ದೇವೆ. ಎಲ್ಲರೂ ಸಹಕರಿಸಬೇಕು ಎಂದು ರೈತರಲ್ಲಿ ಮನವಿ ಮಾಡಿದರು.

Related