ಮಕ್ಕಳ ಸಹಾಯವಾಣಿ ಸಲಹಾ ಸಮಿತಿ

ಮಕ್ಕಳ ಸಹಾಯವಾಣಿ ಸಲಹಾ ಸಮಿತಿ

ಬಳ್ಳಾರಿ : ಹೊಸಪೇಟೆ ತಾಲ್ಲೂಕಿನ ಎಲ್ಲಾ ಬಾಲ್ಯವಿವಾಹ ನಿಷೇಧ ಅಧಿಕಾರಿಗಳು ಬಾಲ್ಯವಿವಾಹ ತಡೆಯಲು ಸಹಕಾರ ನೀಡಬೇಕು, ಬಾಲ್ಯ ವಿವಾಹ ತಡೆಯಾಜ್ಞೆಯನ್ನು ಪಡೆದುಕೊಳ್ಳಬೇಕು ಎಂದು ಸಹಾಯಕ ಆಯುಕ್ತ ಶೇಖ್ ತನ್ವೀರ್ ಅಸೀಫ್ ಸೂಚಿಸಿದರು.

ಸಹಾಯಕ ಆಯುಕ್ತರ ಸಭಾಂಗಣದಲ್ಲಿ ನಡೆದ ಮಕ್ಕಳ ಸಹಾಯವಾಣಿ ತಾಲ್ಲೂಕು ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರತಿಯೊಂದು ಬಾಲ್ಯವಿವಾಹ ಪ್ರಕರಣಗಳ ಸಂಬಂಧ ಎಫ್. ಐ.ಆರ್ ದಾಖಲಿಸಿ ಎಂದು ಸೂಚಿಸಿದ ಎಸಿ ಶೇಖ್ ತನ್ವೀರ್ ಅಸೀಫ್, ಪ್ರತಿಯೊಂದು ಇಲಾಖೆ ಹಾಗೂ ಮಕ್ಕಳ ಪಾಲನಾ ಕೇಂದ್ರಗಳಲ್ಲಿ 1098 ಮಕ್ಕಳ ಸಹಾಯವಾಣಿ ಲೋಗೋದೊಂದಿಗೆ ಗೋಡೆಬರಹ ಬರೆಸುವಂತೆ ಸೂಚಿಸಿದರು.

ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿ ಸೂಕ್ತ ಸಲಹೆ, ಮರ‍್ಗರ‍್ಶನ ಮತ್ತು ಮಕ್ಕಳ ಸಂರಕ್ಷಣೆ ಯೋಜನೆಗೆ ಸಭೆ ಹಮ್ಮಿಕೊಂಡು ಚೈಲ್ಡ್ ಲೈನ್ ಕರ‍್ಯಕ್ರಮ ಪರಿಣಾಮಕಾರಿ ಮುಂದುವರಿಸಿಕೊಂಡು ಹೋಗುಂತೆ ಸಲಹೆ ನೀಡಿದರು.

Related