ಆತ್ಮಹತ್ಯೆಗೆ ಶರಣಾದ ದಂಪತಿ

ಆತ್ಮಹತ್ಯೆಗೆ ಶರಣಾದ ದಂಪತಿ

ಬಳ್ಳಾರಿ : ಜಿಲ್ಲೆಯ ಹರಪನಹಳ್ಳಿ ತಾಲೂಕು ಶಿಂಗ್ರಿಹಳ್ಳಿ ಗ್ರಾಮದಲ್ಲಿ ದಂಪತಿಗಳಿಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ನಡೆದಿದೆ.
ಪತ್ನಿ ಸುಧಾ (30), ಪತಿ ತೆಲಿಗರ ಹನುಮಂತಪ್ಪ (33) ಆತ್ಮಹತ್ಯೆಗೆ ಶರಣಾದ ದಂಪತಿ.

ಮಕ್ಕಳಾಗದ ಬೇಸರ ಸೇರಿ ಇನ್ನಿತರೆ ಕೌಟುಂಬಿಕ ವಿಚಾರಗಳಿಗೆ ಸಂಬಂಧಿಸಿದಂತೆ ಪತಿ-ಪತ್ನಿಯರ ನಡುವೆ ನಿತ್ಯ ಕಲಹವಾಗುತ್ತಿದ್ದು ಇದರಿಂದ ಬೇಸತ್ತ ಪತ್ನಿ ಸುಧಾ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದರಿಂದ ಭಯಭೀತನಾದ ಪತಿ ತೆಲಿಗರ ಹನುಮಂತ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಹಲವಾಗಲು ಪೊಲೀಸ್ ಠಾಣೆಯಲ್ಲಿ ಹುಡುಗಿಯ ತಂದೆ ಮತ್ತು ಹುಡುಗನ ಸಹೋದರ ಪ್ರತ್ಯೇಕ ದೂರು-ಪ್ರತಿದೂರು ನೀಡಿದ್ದು, ಪ್ರತ್ಯೇಕ ಪ್ರಕರಣ ದಾಖಲಾಗಿವೆ.

Related