ಡಾಲರ್‌ಗೆ 80 ರು. ತಲುಪಿದ ಕರೆನ್ಸಿ: ಸರ್ಕಾರ ಏನು ಮಾಡುತ್ತಿದೆ?

ಡಾಲರ್‌ಗೆ 80 ರು. ತಲುಪಿದ ಕರೆನ್ಸಿ: ಸರ್ಕಾರ ಏನು ಮಾಡುತ್ತಿದೆ?

ನವದೆಹಲಿ, ಜುಲೈ.16: ಡಾಲರ್ ವಿರುದ್ಧ ರೂಪಾಯಿ ಐತಿಹಾಸಿಕ ಕುಸಿತ ಕಂಡು 80 ರುಪಾಯಿಗಳಿಗೆ ಹತ್ತಿರವಾಗುತ್ತಿದ್ದಂತೆ ರುಪಾಯಿ ಅಪಮೌಲ್ಯಕ್ಕೆ ಕಾರಣವಾದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

2014ರ ಮೊದಲು ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರು ಯುಪಿಎ ಸರ್ಕಾರವನ್ನು ಕುಸಿಯುತ್ತಿರುವ ರೂಪಾಯಿಯ ಬಗ್ಗೆ ತರಾಟೆಗೆ ತೆಗೆದುಕೊಂಡಂತೆ ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಕಾಂಗ್ರೆಸ್ ನಾಯಕರು ಸಾಮಾಜಿಕ ಮಾಧ್ಯಮಗಳಲ್ಲಿ ಸರಣಿ ಟ್ವಿಟ್‌ಗಳ ಮೂಲಕ ಆರೋಪಗಳ ಸುರಿಮಳೆಗರೆದಿದ್ದಾರೆ.

 

ಪಕ್ಷದ ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ತಮ್ಮ ಟ್ವೀಟ್‌ನಲ್ಲಿ, ರೂಪಾಯಿ 40: ರಿಫ್ರೆಶ್, 50: ಬಿಕ್ಕಟ್ಟಿನಲ್ಲಿ ಭಾರ, 60: ICU. 70: ಆತ್ಮನಿರ್ಭರ್, 80: ಅಮೃತಕಾಲ್ ಎಂದು ವ್ಯಂಗ್ಯವಾಗಿ ಟೀಕೆ ಮಾಡಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ರೂಪಾಯಿಯ ಮುಕ್ತ ಕುಸಿತವನ್ನು ತಡೆಯಲು ಸರ್ಕಾರವು ಎನ್ನ ಅಸಮರ್ಥತೆಯಿಂದ ಎಲ್ಲಾ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ ಎಂದು ಹೇಳಿದರು. ಈಗ ರೂಪಾಯಿಯು ಮಾರ್ಗದರ್ಶಕ್ ಮಂಡಲದ ವಯಸ್ಸನ್ನು ದಾಟಿದೆ. ಅದು ಇನ್ನೂ ಎಷ್ಟು ಕುಸಿಯುತ್ತದೆ. ಸರ್ಕಾರದ ವಿಶ್ವಾಸಾರ್ಹತೆ ಇನ್ನೂ ಎಷ್ಟು ಕುಸಿಯುತ್ತದೆ. ವಾಹ್ ಮೋದಿ ಜೀ “#FallingRupeeDestroyingEconomy” ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.

 

ಮಾರ್ಗದರ್ಶಕ್ ಮಂಡಲ್ ಎಂದರೆ ಬಿಜೆಪಿಯ ಹಿರಿಯರನ್ನು ಒಳಗೊಂಡ ಮಾರ್ಗದರ್ಶಕರ ಗುಂಪಾಗಿದೆ. 2013ರಲ್ಲಿ ಯುಪಿಎ ಸರ್ಕಾರವು ನಾಲ್ಕು ತಿಂಗಳೊಳಗೆ ಯುಎಸ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯವನ್ನು 69ರಿಂದ 58ಕ್ಕೆ ತಂದಿತ್ತು. ಇದೆಲ್ಲವೂ ಇತ್ತೀಚಿನ ಇತಿಹಾಸದ ಭಾಗವಾಗಿದೆ. ಇದು ಬಿಜೆಪಿ ಸರ್ಕಾರ ಜನರಿಗೆ ಮೀಸಲಿಟ್ಟ ಕಾಣಿಕೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಟೀಕಿಸಿದ್ದಾರೆ.

Related