ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಲಕ್ಷ ನೀಡಿದ ಎಂ.ವಿ ವೇಮನ

ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಲಕ್ಷ ನೀಡಿದ ಎಂ.ವಿ ವೇಮನ

ಮಾಲೂರು : ಕೋಲಾರ ಜಿಲ್ಲಾ ಕೃಷಿ ಸಾಮಾಗ್ರಿಗಳ ಮಾರಾಟಗಾರರ ಜಿಲ್ಲಾ ಸಂಘದ ವತಿಯಿಂದ ಕೋವಿಡ್-19 ಹತೋಟಿಗಾಗಿ 2 ಲಕ್ಷ 5 ಸಾವಿರ ರೂಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗಾಗಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಮುಖಾಂತರ ಡಿಡಿಯನ್ನು ತಲುಪಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಎಂ.ವಿ.ವೇಮನ ತಿಳಿಸಿದರು.

ಪಟ್ಟಣದ ಕೃಷಿ ಸಾಮಾಗ್ರಿ ಮಾರಾಟಗಾರರ ಸಂಘ ಹಾಗೂ ತಾಲೂಕು ಸಂಘದಿಂದ ಮುಖ್ಯಮಂತ್ರ ಪರಿಹಾರ ನಿಧಿಗೆ 2 ಲಕ್ಷ 5 ಸಾವಿರ ರೂಗಳ ಡಿಡಿಯನನು ಸಂಘದ ಸದಸ್ಯರೊಂದಿಗೆ ಕೃಷಿ ಜಿಲ್ಲಾ ಜಂಟಿ ನಿರ್ದೇಶಕರಿಗೆ ವಿತರಿಸಿ ಮಾತನಾಡಿದರು.

ದೇಶ್ಯಾದಂತ ಹಾಗೂ ರಾಜ್ಯದಲ್ಲಿ ಕರೋನಾ ಸೊಂಕು ಮಹಾಮಾರಿ ಅತಿ ವೇಗವಾಗಿ ಹರಡುತ್ತಿದೆ. ಸೊಂಕು ಹರಡದಂತೆ ಮುನ್ನೆಚರಿಕೆಯಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು 2ನೇ ಅವಧಿಗೆ ಮನೆಯಿಂದ ಸಾರ್ವಜನಿಕರು ಮನೆಯಿಂದ ಹೊರಬರದೇ ಲಾಕ್‍ಡೌನ್ ಆದೇಶಿಸಿದೆ. ಪ್ರತಿಯೊಬ್ಬ ನಾಗರೀಕರು ಸೊಂಕು ಹರಡದಂತೆ ಆರೋಗ್ಯ ಇಲಾಖೆ, ಪೋಲಿಸ್, ಪುರಸಭೆಗೆ ಸಹಕಾರ ನೀಡುವುದು ನಮ್ಮೇಲ್ಲರ ಜವಾಬ್ದಾರಿಯಾಗಿದೆ ಎಂದರು.

ಪ್ರತಿಯೊಬ್ಬರು ಸೊಂಕು ಹರಡದಂತೆ ಸಾಮಾಜಿಕ ಅಂತರ ಪಾಲಿಸಿ ಅಗತ್ಯ ವಸ್ತುಗಳಿಗೆ ಹೊರಬಂದಾಗ ಮಾಸ್ಕ್ ಧರಿಸಿಬೇಕು. ಲಾಕ್‍ಡೌನ್ ಸಂದರ್ಭದಲ್ಲಿ ಬಡವರು, ಕಾರ್ಮಿಕರಿಗೆ ಹಸಿವು ನೀಗಿಸಲು ಜನಪ್ರತಿನಿಧಿಗಳು, ಸಮಾಜ ಸೇವಕರು ದಿನಸಿ ಪದಾರ್ಥಗಳು, ತರಕಾರಿ, ಆಹಾರ ವಿತರಣೆ ಮಾಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು, ಬಡವರು, ಕಾರ್ಮಿಕರು ಸೊಂಕಿಗೆ ಒಳಗಾದವರಿಗಾಗಿ ಜಿಲ್ಲಾ ಕೃಷಿ ಸಾಮಾಗ್ರಿ ಮಾರಾಟಗಾರರ ಸಂಘ, ತಾಲೂಕು ಸಂಘದ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಿಲ್ಲಾ ಸಂಘದಿಂದ ಕೋವಿಡ್ ಸೋಂಕು ಹತೋಟಿಗಾಗಿ 1ಲಕ್ಷ 5ಸಾವಿರ ರೂ, ತಾಲೂಕು ಸಂಘದಿಂದ 1 ಲಕ್ಷ ರೂಗಳು ಸೇರಿದಂತೆ 2 ಲಕ್ಷ 5 ಸಾವಿರ ರೂಗಳ ಡಿಡಿಯನ್ನು ಸರಕಾರಕ್ಕೆ ತಲುಪಿಸಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ನೀಡಿತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಪಿರ್ದೂಸ್, ತಾಲೂಕು ಸಂಘದ ಅಧ್ಯಕ್ಷ ಸಿ.ಪಿ.ನಾಗರಾಜ್, ರಾಜೇಶ್, ಕೋಟೇಶ್, ಮುಮರೇಶ್, ಸುರೇಶ್, ಚಂದ್ರಪ್ಪ,ರಾಮನಾಥ್, ಹಾಗೂ ಶ್ರೀನಿವಾಸ್ ರೆಡ್ಡಿ ಹಾಜರಿದ್ದರು.

Related