296 ಕಿ.ಮಿ. ಎಕ್ಸ್ ಪ್ರೆಸ್ ಹೈವೆಗೆ ಪ್ರಧಾನಿ ಮೋದಿ ಚಾಲನೆ

296 ಕಿ.ಮಿ. ಎಕ್ಸ್ ಪ್ರೆಸ್ ಹೈವೆಗೆ ಪ್ರಧಾನಿ ಮೋದಿ ಚಾಲನೆ

ಲಖ್ನೋ,ಜು.16– 14,850 ಕೋಟಿ ರೂ. ವೆಚ್ಚದ 296 ಕಿಮೀ ಉದ್ದದ ಅತ್ಯಾಧುನಿಕ ಬುಂದೇಲ್‍ಖಂಡ್ ಎಕ್ಸ್‍ಪ್ರೆಸ್‍ವೇಯನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಉದ್ಘಾಟಿಸುತ್ತಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಬುಂದೇಲ್‍ಖಂಡ್ ಎಕ್ಸ್‍ಪ್ರೆಸ್‍ವೇ ಇಲ್ಲಿನ ಜನರಿಗಾಗಿ ಉದ್ಯೋಗದ ಆಯಾಮಗಳನ್ನು ತೆರೆಯುತ್ತದೆ ಮತ್ತು ಈ ಪ್ರದೇಶದ ಕೈಗಾರಿಕಾ ಅಭಿವೃದ್ಧಿಯಾಗಲಿದೆ,ಇದು ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ ಎಂದಿದ್ದಾರೆ.

 

ಉದ್ಯೋಗದ ಜೊತೆಗೆ ಈ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಮತ್ತು ವ್ಯಾಪಾರದ ಅಭಿವೃದ್ಧಿಯ ಸಾಧ್ಯತೆಯನ್ನು ಸರ್ಕಾರ ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ. 2020ರ ಫೆಬ್ರವರಿ ತಿಂಗಳಲ್ಲಿ ಈ ಅತ್ಯಾಧುನಿಕ ಬುಂದೇಲ್‍ಖಂಡ್ ಎಕ್ಸ್‍ಪ್ರೆಸ್‍ವೇಗೆ ಪ್ರಧಾನಿಗಳು ಅಡಿಪಾಯ ಹಾಕಿದ್ದರು. ಇದರಲ್ಲಿ ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಇದೀಗ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತಿದೆ.

 

ಬುಂದೇಲ್‍ಖಂಡ್ ಎಕ್ಸ್‍ಪ್ರೆಸ್‍ವೇ ನಿರ್ಮಾಣಕ್ಕೆ 14,850 ಕೋಟಿ ರೂ. ಇದೀಗ 296 ಕಿಮೀ ಉದ್ದದ ಈ ಎಕ್ಸ್‍ಪ್ರೆಸ್‍ವೇ ಇಂದು ಲೋಕಾರ್ಪಣೆಗೊಳ್ಳುತ್ತಿದೆ.

Related