2024ರ ಐಪಿಎಲ್ ಮತ್ತೆ ವಿರಾಟ್ ಕೊಹ್ಲಿಗೆ ನಾಯಕನ ಪಟ್ಟ..?  

2024ರ ಐಪಿಎಲ್ ಮತ್ತೆ ವಿರಾಟ್ ಕೊಹ್ಲಿಗೆ ನಾಯಕನ ಪಟ್ಟ..?  

ಬೆಂಗಳೂರು: ಈ ಬಾರಿ ನಡೆಯಲಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಗೆ ಕಪ್ ಗೆಲ್ಲುವ ನಿರೀಕ್ಷೆಯನ್ನು ಬಹಳ ಹೊಂದಿದ್ದು ಮತ್ತೆ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡಕ್ಕೆ ನಾಯಕರಾಗುತ್ತಾರೆ ಎಂದು ಇತ್ತೀಚಿಗೆ ಸಿದ್ದಿ ಕೇಳಿ ಬರುತ್ತಿದೆ.

ಮತ್ತೆ ವಿರಾಟ್ ಕೊಹ್ಲಿಗೆ ನಾಯಕನ ಪಟ್ಟ..?

2024ನೇ ಸಾಲಿನ ಐಪಿಎಲ್ ಪಂದ್ಯಾವಳಿ ಪ್ರಾರಂಭವಾಗಲು ಕೇವಲ ಇನ್ನೇನು ಮೂರು ತಿಂಗಳಗಳು ಬಾಕಿ ಇದ್ದು ಈಗಾಗಲೇ ಎಲ್ಲಾ ತಂಡಗಳು ಟೂರ್ನಿಗಾಗಿ ಫುಲ್ ಪ್ರಿಪರೇಷನ್ ನಡೆಸಿವೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಮಿನಿ ಆಕ್ಷನ್ನಲ್ಲಿ ತಮ್ಮ ತಂಡಕ್ಕೆ ಬೇಕಾದ ಆಟಗಾರರನ್ನ ಖರೀದಿಸಿವೆ. RCB ಫ್ರಾಂಚೈಸಿಯೂ ಅಳೆದು ತೂಗಿ ಕೋಟಿ, ಕೋಟಿ ನೀಡಿ ಕೆಲ ಆಟಗಾರರನ್ನ ತಮ್ಮ ಸೈನ್ಯಕ್ಕೆ ಸೇರಿಸಿಕೊಂಡಿದೆ.

ಇನ್ನು ಐಪಿಎಲ್ ಇತಿಹಾಸದಲ್ಲಿ ಒಮ್ಮೆಯೂ ಕಪ್ ಗೆಲ್ಲದ ತಂಡಗಳ ಪೈಕಿ RCB ಯೂ ಒಂದು. ಆದ್ರೆ, ಈ ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಬೇಕು ಅಂತ RCB ಫ್ರಾಂಚೈಸಿ ಪಣ ತೊಟ್ಟಿದೆ. ಇದಕ್ಕಾಗಿ ತಂಡದ ನಾಯಕತ್ವದಲ್ಲಿ ಬದಲಾವಣೆ ಮಾಡೋ ಯೋಚನೆಯಲ್ಲಿದೆ. ಮತ್ತೆ ವಿರಾಟ್ ಕೊಹ್ಲಿಗೆ ಪಟ್ಟ ಕಟ್ಟೋ ಪ್ಲಾನ್ ಮಾಡಿದೆ ಎನ್ನಲಾಗಿದೆ.

ಫಾಫ್ ಡು ಪ್ಲೆಸಿಸ್ ಕ್ಯಾಪ್ಟನ್ಸಿಯಲ್ಲಿ ತಂಡ RCB ಹೇಳಿಕೊಳ್ಳುವಂತ ಯಶಸ್ಸು ಸಾಧಿಸಿಲ್ಲ. ಕಳೆದ ಸೀಸನ್ನಲ್ಲಿ 14 ಪಂದ್ಯಗಳಲ್ಲಿ 7ರಲ್ಲಿ ಮಾತ್ರ ಜಯಗಳಿಸಿತ್ತು. ಇನ್ನು ಹೋಂಗ್ರೌಂಡ್ನಲ್ಲಾಡಿದ 7 ಮ್ಯಾಚ್‌ಗಳಲ್ಲಿ 4ರಲ್ಲಿ ಸೋಲು ಕಂಡಿತ್ತು. ಇದ್ರಿಂದ ಡು ಪ್ಲೆಸಿಸ್ ಕ್ಯಾಪ್ಟನ್ಸಿ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಇದಲ್ಲದೇ ವಯಸ್ಸು ಕೂಡ ಡುಪ್ಲೆಸಿಸ್‌ಗೆ ಅಡ್ಡಿಯಾಗಿದೆ. 38 ವರ್ಷದ ಡು ಪ್ಲೆಸಿಸ್, ಇನ್ನು ಒಂದು ಸೀಸನ್ ಆಡಿದ್ರೆ ಹೆಚ್ಚು. ಈ ಎಲ್ಲಾ ಕಾರಣದಿಂದಾಗಿ ಡುಪ್ಲೆಸಿಸ್‌ಗೆ ಕೊಕ್ ಕೊಟ್ಟು  ಕೊಹ್ಲಿಗೆ ಮತ್ತೆ ನಾಯಕನ ಸ್ಥಾನ ನೀಡಲು ಫ್ರಾಂಚೈಸಿ ಚಿಂತಿಸ್ತಿದೆ ಎಂದು ತಿಳಿದು ಬಂದಿದೆ..

 

Related