ಸಾರಿಗೆ ಇಲಾಖೆಗೆ 170 ಕೋಟಿ ನಷ್ಟ

ಸಾರಿಗೆ ಇಲಾಖೆಗೆ 170 ಕೋಟಿ  ನಷ್ಟ

ಹುಮನಾಬಾದ್ : ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, 9 ದಿನವೂ ಸಾವಿರಾರು ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಹೋರಾಟ ತೀವ್ರಗೂಳಿಸಿದ ಕಾರಣ ಸಾರಿಗೆ ಇಲಾಖೆಗೆ 170 ಕೋಟಿ ಆದಾಯ ನಷ್ಟವಾಗಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಸಮೀಪವಿರುವ ಮಾಣಿಕ ನಗರ ಮಾರ್ಥಂಡ ವಸತಿ ನಿಲಯದಲ್ಲಿ ಗುರುವಾರ ಪತ್ರಕರ್ತರೂಂದಿಗೆ ಮಾತನಾಡಿದ ಅವರು ನಮ್ಮ ಸಿಬಂದ್ದಿಗೆ ಯಾಕೆ ಅರ್ಥವಾಗುತ್ತಿಲ್ಲ ಅವರ ನಡೆ ನಮಗೆ ಯಕ್ಷ ಪ್ರಶ್ನೆಯಾಗಿದೆ ನಾನು ಅಲ್ಲದೇ ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲದೇ ಅನೇಕ ರೈತ ಮುಖಂಡರು ಮನವಿ ಮಾಡಿಕೊಂಡಿದ್ದರು.

ಚಳುವಳಿ ಹಿಂತೆಗೆದುಕೊಳ್ಳದೆ ನಿನ್ನೆ 59 ಬಸ್ಗಳಿಗೆ ಕಲ್ಲೇಶಿಸಿದ್ದಾರೆ ಇದು ಸರಿಯಾದುದಲ್ಲ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡ್ಡಿಸಿದವರನ್ನು ಯಾವುದೇ ಮುಲಾಜಿಲ್ಲದೇ ತಪೆಸಗಿದವರ ಮೇಲೆ ಕ್ರಮಕ್ಕೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ.

ನಾಳೆ ವರೆಗೆ 5000 ಬಸ್ಗ್ಳನ್ನು ಓಡಾಟ ಪ್ರಾರಂಭಿಸುತ್ತಾರೆ. 24000 ಖಾಸಗಿ ವಾಹನಗಳು ಓಡಾಡುತ್ತಿವೆ. ಮುಂದೇ ನಮ್ಮ ಬಸ್ಸಗಳು ರಸ್ತೆಗಳಿದಾಗ ಖಾಸಗಿಯವರಿಗೆ ಹಂತ ಹಂತವಾಗಿ ಕಡಿಮೆ ಮಾಡುತ್ತೆವೆ. ಸಂಸ್ಥೆಗಳ ಬಸ್ಸಗಳು ಅಚ್ಚುಕಟತ್ತನದಿಂದ ನಡೆಯುವುದರಿಂದ ಸಂಸ್ಥೆಯವರ ಮೇಲೆ ಸಾರ್ವಜನಿಕರಿಗೆ ಹೆಚ್ಚಿನ ನಂಬಿಕೆ ಇದೆ. ಬರುವ ದಿನಗಳಲ್ಲಿ ಸಮಯಲ್ಲೆ ಸರಿಯಗಿ ಬಸ್ಸಗಳನ್ನು ಓಡಿಸುತ್ತೆವೆ.

ತೆಲೆಂಗಾಣದಲ್ಲಿ ಸರ್ಕಾರಿ ನೌಕರರನ್ನಾಗಿ ಬೇಡಿಕೆ ಇತ್ತು 49 ದಿನ ಪ್ರತಿಭಟಿಸಿದರು ಆದರೇ ಆ ಸರ್ಕಾರಿ ಸತಾರಾಮ ಒಪ್ಪಲಿಲ್ಲ, ಆದರೇ ಆಂದ್ರ ಪ್ರದೇಶದಲ್ಲಿ ಚುನಾವಣಾ ಪ್ರನಾಳಿಕೆಯಲ್ಲಿ ಸರ್ಕಾರಿ ನೌಕರರನ್ನಾಗಿ ಮಾಡುತ್ತೆವೆಂದು ಹೇಳಿದ್ದರಿಂದ ಅದನ್ನು ಆ ರಾಜ್ಯದಲ್ಲಿ ಜಾರಿಗೆ ತಂದಿದ್ದಾರೆ.
ಎಸ್ಮಾ ಜಾರಿ ಬಗ್ಗೆ ವಿಚಾರ ಮಾಡಿಲ, ಅನೇಕ ಸಿಬಂದಿಗಳು ಕೆಲಸಕ್ಕೆ ಹಾಜರಾಗ್ಗಿದ್ದಾರೆ. ಪ್ರತಿ ನಿತ್ಯ ಬೇಳವಣಿಗೆ ಚೇನ್ನಾಗಿದೆ. ಅಥಣಿಯಲ್ಲಿ ನನ್ನ ಸುಪುತ್ರನ ಮುಖಂಡತ್ವದಲ್ಲಿ ಸಾರಿಗೆ ನೌಕರರ ಮನವಲಿಸಿ ಅಲ್ಲಿ 120ಬಸ್ಸುಗಳನ್ನು ಓಡಿಸುತ್ತಿದ್ದಾರೆ.

ಸಂತಸದ ವಿಚಾರ ಸಿಬಂದಗಳು ಹಟಕ್ಕೆ ಜೋತು ಬಿಳದೆ ಎಲ್ಲರಲ್ಲೂ ವಿನಂತಿಸುತ್ತೆನೆ. ಸಾರ್ವಜನಿಕರು ಕೊರೋನಾ ಸಂಕಷ್ಟದಲ್ಲಿದ್ದಾರೆ ಹಟಕ್ಕೆ ಬೀಳುವುದು ಸರಿಯಲ್ಲ. ಇನ್ನು ಮೃದು ಧೋರಣೆಯಲ್ಲಿಯೇ ಇದ್ದೇವೆ. ಜನರ ಆಕ್ರೋ಼ಶಕ್ಕೆ ತುತ್ತಾಗುತ್ತೇವೆ ಆದರಿಂದ ಇಂತಹ ಸಮಯದಲ್ಲಿ ತಾವು ಸಹಕರಿಸಿದಿದ್ದಾದದರೆ ಬರುವ ಮೇ. 4 ರಂದು ತಮ್ಮ ಜೊತೆ ಸಮಾಲೋಚಿಸಿ ತಮ್ಮ ಸಂಬಳ ಹೆಚ್ಚು ಮಾಡಲಾಗುವದೆಂದು ತಿಳಿಸಿದರು.

ಬೀದರ ಲೋಕಸಭಾ ಸದಸ್ಯ ಭಗವಂತ ಖೋಭಾ, ಕಲಬುರ್ಗಿ ಲೋಕಸಭಾ ಸದಸ್ಯ ಉಮೇಶ ಜಾದವ ಇತರರು ಇದ್ದರು.

Related