ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಬೇಕೆ? ಹಾಗಿದ್ರೆ ಹೀಗೆ ಮಾಡಿ!

ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮುಕ್ತಿ ಬೇಕೆ? ಹಾಗಿದ್ರೆ ಹೀಗೆ ಮಾಡಿ!

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲೂ ಕಾಣುತ್ತಿರುವ ಸಮಸ್ಯೆ ಎಂದರೆ ಅದು ಗ್ಯಾಸ್ಟ್ರಿಕ್ ಸಮಸ್ಯೆ ಯಾಗಿದ್ದು, ಪ್ರತಿಯೊಬ್ಬರು ಈ ಗ್ಯಾಸ್ಟಿಕ್ ಸಮಸ್ಯೆಯಿಂದ ಒಂದಲ್ಲ ಒಂದು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.

ಇನ್ನು ಗ್ಯಾಸ್ಟಿಕ್ ಬರಲು ಸಾಮಾನ್ಯವಾಗಿ ತಡವಾಗಿ ಊಟ ಮಾಡುವುದು ಅಥವಾ ಸಿಗರೇಟ್ ಸೇದುವುದರಿಂದ ಎದೆ ಉರಿ ಬರುವುದು ಹೀಗೆ ಹಲವಾರು ರೀತಿಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸುತ್ತದೆ.

ಗ್ಯಾಸ್ಟ್ರಿಕ್ ಅನ್ನು ಕ್ರಮೇಣವಾಗಿ ಯಾವುದೇ ಔಷಧಿಗಳಿಲ್ಲದೆ ಮನೆಯಲ್ಲಿ ಸಿಗುವಂತಹ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಗ್ಯಾಸ್ಟ್ರಿಕ್ ಅನ್ನು ಕಡಿಮೆ ಮಾಡಿಕೊಳ್ಳಬಹುದು.

ಮನೆಯಲ್ಲಿ ಸಿಗುವಂತ ಪದಾರ್ಥಗಳೆಂದರೆ ಜೀರಿಗೆ, ಎಳನೀರು, ಸೌತೆಕಾಯಿ, ಮಜ್ಜಿಗೆ, ಬಾಳೆ ಹಣ್ಣುಗಳನ್ನು ಊಟ ಮಾಡಿದ ನಂತರ ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಅಥವಾ ಅಸಿಡಿಟಿ ಸಮಸ್ಯೆಯು ಕಡಿಮೆಯಾಗುತ್ತದೆ.

ಗ್ಯಾಸ್ಟ್ರಿಕ್ ಸಮಸ್ಯೆಯನ್ನು ತಡೆಯಲು ಈ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಉತ್ತಮ. ಈ ಕೆಲವು ಸರಳ ಅಭ್ಯಾಸಗಳು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತವೆ. ಇದನ್ನೂ ಓದಿ: ನಿದ್ರೆ ಸರಿಯಾಗಿ ಬರುತ್ತಿಲ್ಲವೇ? ಹಾಗಾದ್ರೆ ಈ ಹಣ್ಣು ಸೇವಿಸಿ!

ಖಾಲಿ ಹೊಟ್ಟೆಯು ಗ್ಯಾಸ್ ಅಥವಾ ಆಮ್ಲೀಯತೆಗೆ ಕಾರಣವಾಗಬಹುದು. ಒಂದೇ ಬಾರಿ ಹೊಟ್ಟೆ ತುಂಬುವಷ್ಟು ಭಾರೀ ಊಟವನ್ನು ತಿನ್ನುವ ಬದಲು, ದಿನಕ್ಕೆ 5 ಬಾರಿ ಸ್ವಲ್ಪ ಸ್ವಲ್ಪ ಆಹಾರ ಸೇವಿಸಿ. “ಬೆಳಗಿನ ಉಪಹಾರವನ್ನು ರಾಜನಂತೆ, ಮಧ್ಯಾಹ್ನದ ಊಟವನ್ನು ರಾಜಕುಮಾರನಂತೆ ಮತ್ತು ರಾತ್ರಿಯ ಊಟವನ್ನು ಬಡವನಂತೆ ಸೇವಿಸಿ” ಎಂದು ಹೇಳಲಾಗುತ್ತದೆ.

ಇನ್ನು ನಿದ್ರೆಯ ಕೊರತೆಯು ಜೀರ್ಣಾಂಗ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಯನ್ನು ಅಡ್ಡಿಪಡಿಸುತ್ತದೆ. ಆದ್ದರಿಂದ, ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು 7-8 ಗಂಟೆಗಳ ನಿದ್ರೆ ಬಹಳ ಮುಖ್ಯ.

ಎಳನೀರು ಸೇವನೆ ಉತ್ತಮ

ಸಾಮಾನ್ಯವಾಗಿ ಗ್ಯಾಸ್ಟಿಕ್ ಬಂದರೆ ಅಂಗಡಿಯಲ್ಲಿ ಸಿಗುವಂತಹ ಕೆಲವು ಪಾನೀಯಗಳನ್ನು ಸೇವಿಸುತ್ತಾರೆ ಆದರೆ ಇದರಿಂದ ಗ್ಯಾಸ್ಟಿಕ್ ಕಡಿಮೆ ಯಾಗದೆ ಬೇರೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಹಾಗಾಗಿ ಎಳನೀರು ಸೇವನೆ ಉತ್ತಮವಾಗಿದೆ.

ಪ್ರತಿನಿತ್ಯ ವ್ಯಾಯಾಮ

ಪ್ರತಿನಿತ್ಯವೂ ವ್ಯಾಯಾಮ ಮಾಡುವುದರಿಂದಲೂ ಕೂಡ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು..

ಕ್ರಮೇಣವಾಗಿ ಆಹಾರ ಸೇವನೆ

ವಯಸ್ಸಿಗೆ ತಕ್ಕಂತೆ ಕ್ರಮೇಣವಾಗಿ ಆಹಾರ ಸೇವನೆ ಮಾಡಬೇಕು. ವಯಸ್ಸಾದಂತೆ ಪ್ರತಿಯೊಬ್ಬರ ದೇಹದಲ್ಲಿ ಜೀರ್ಣಶಕ್ತಿಯು ಕಡಿಮೆಯಾಗುತ್ತಾ ಬರುತ್ತದೆ ಹಾಗಾಗಿ ಕಷ್ಟಕರವಾದ ಆಹಾರಗಳನ್ನು ಸೇವಿಸುವ ಬದಲು ಉತ್ತಮ ಆಹಾರ ಸೇವನೆ ಮಾಡುವುದು ಒಳ್ಳೆಯದು.

ಮಲಗುವ ಅಭ್ಯಾಸ ತಪ್ಪಿಸಿ

ಕೆಲವೊಬ್ಬರಿಗೆ ಊಟ ಮಾಡಿದ ತಕ್ಷಣ ಮಲಗುವ ಅಭ್ಯಾಸ ಇರುತ್ತದೆ ಅಂಥವರಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬರುತ್ತದೆ ಹಾಗಾಗಿ ಊಟ ಮಾಡಿದ ತಕ್ಷಣ ಮಲಗಬೇಡಿ.

ತಿನ್ನಬೇಕಾದರೆ ಕೆಲವರು ಅತಿ ವೇಗವಾಗಿ ತಿನ್ನುತ್ತಾರೆ ಅದು ಕೂಡ ಅಜೀರ್ಣ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ ಹಾಗಾಗಿ ಯಾವುದೇ ಊಟ ಅಥವಾ ಹಣ್ಣು ಇನ್ನಿತರ ಏನೆ ಸೇವನೆ ಮಾಡಿರು ಬೇಕಾದರೂ ಕೂಡ ಅದನ್ನು ನಿಧಾನವಾಗಿ ತಿನ್ನಬೇಕಾಗುತ್ತದೆ ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರವಿರಬಹುದು.

Related