ದೆಹಲಿ: ಕಾಶ್ಮೀರದಲ್ಲಿ ಪಾಕಿಸ್ತಾನದ ಭಯೋತ್ಪಾದಕರು ದಾಳಿ ಮಾಡಿರುವುದರಿಂದ ದೇಶದಲ್ಲಿರುವ ಎಷ್ಟೋ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು ಇದೀಗ ಪಾಕಿಸ್ತಾನದ ಮೇಲೆ ಪ್ರತಿಕಾರಕ್ಕೆ ಸಜ್ಜಾಗಿರುವ ಭಾರತ ನಾಳೆ ದೇಶದಾದ್ಯಂತ ಐತಿಹಾಸಿಕ ಮಾಕ್ ಡ್ರಿಲ್ ಕೈಗೊಳ್ಳಲಿದೆ.
ಇನ್ನು ಮಾಕ್ ಡ್ರಿಲ್ ಬಗ್ಗೆ ಸಂಪೂರ್ಣವಾಗಿ ತರಬೇತಿ ನೀಡಲಾಗುತ್ತಿದ್ದು ಗೃಹರಕ್ಷಕ ದ,ಳ ಎನ್ಸಿಸಿ ಎನ್ಎಸ್ಎಸ್ ವಿದ್ಯಾರ್ಥಿಗಳು ಸೇರಿದಂತೆ ಇನ್ನೂ ಹಲವಾರು ವಿದ್ಯಾರ್ಥಿಗಳು ಈ ಮಾಕ್ ಡ್ರಿಲ್ ನಲ್ಲಿ ಪಾಲ್ಗೊಳ್ಳಲು ಸೂಚನೆ ನೀಡಲಾಗಿದೆ.
ಹೌದು, ಪಾಕಿಸ್ತಾನದ ವಿರುದ್ಧ ಪ್ರತೀಕಾರಕ್ಕೆ ಸಜ್ಜಾಗಿರುವ ಭಾರತ ನಾಳೆ ದೇಶಾದ್ಯಂತ ಐತಿಹಾಸಿಕ ಮಾಕ್ ಡ್ರಿಲ್ ಕೈಗೊಳ್ಳುತ್ತಿದೆ. ದೇಶದ 259 ಕಡೆ 3 ಹಂತಗಳಲ್ಲಿ ರಕ್ಷಣಾ ಮಾಕ್ ಡ್ರಿಲ್ಗೆ ಈಗಾಗಲೇ ಸಿದ್ಧತೆ ನಡೆಸಲಾಗಿದೆ. ‘ಆಪರೇಷನ್ ಅಭ್ಯಾಸ್’ ಹೆಸರಲ್ಲಿ ಮಾಕ್ ಡ್ರಿಲ್ ನಡೆಸಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಆದೇಶ ನೀಡಿದೆ. ಇದನ್ನೂ ಓದಿ:
ರಾಜ್ಯದ 3 ಭಾಗಗಳಲ್ಲಿ ಮಾಕ್ ಡ್ರಿಲ್!
ದೇಶದ 259 ಕಡೆಗಳಲ್ಲಿ ಕರ್ನಾಟಕದ ರಾಯಚೂರಿನ ಶಕ್ತಿನಗರ, ಕಾರವಾರದ ಮಲ್ಲಪುರ ಹಾಗೂ ಬೆಂಗಳೂರು ನಗರದ 3 ಭಾಗಗಳಲ್ಲಿ ನಾಳೆ ಮಾಕ್ ಡ್ರಿಲ್ ನಡೆಸಲಾಗುತ್ತಿದೆ. ಸಿವಿಲ್ ಡಿಫೆನ್ಸ್ನ ಸಿಬ್ಬಂದಿ ಮಾತ್ರ ಈ ಅಣುಕು ಕವಾಯತಿನಲ್ಲಿ ಭಾಗಿಯಾಗುತ್ತಿದ್ದಾರೆ.
